ಶಿರಾಡಿಘಾಟ್ ಬಂದ್‌

7

ಶಿರಾಡಿಘಾಟ್ ಬಂದ್‌

Published:
Updated:

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-48 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟಿ ಭಾಗದ ಕೆಂಪುಹೊಳೆ ಗೆಸ್ಟ್ ಹೌಸ್‌ನಿಂದ ಅಡ್ಡಹೊಳೆರವರೆಗಿನ ರಸ್ತೆ ಕಾಂಕ್ರಿಟೀಕರಣಕ್ಕೆ ಸಿದ್ಧತೆ ನಡೆದಿದ್ದು, ಇದೇ 20ರಿಂದ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.

ಮಾರನಹಳ್ಳಿ ಪೋಲೀಸ್ ಔಟ್ ಪೋಸ್ಟ್ ಕಾಡುಮನೆ ಎಸ್ಟೇಟ್ ರೋಡ್ ಜಂಕ್ಷನ್‌ನಿಂದ ಪುತ್ತೂರು ತಾಲ್ಲೂಕಿನ ಗುಂಡ್ಯ ಸಮೀಪದ ಅಡ್ಡಹೊಳೆಯವರೆಗೆ ಕಾಮಗಾರಿ ನಡೆಯಲಿದೆ.

ಲಘು ವಾಹನಗಳು, ಸಾಮಾನ್ಯ ಬಸ್‌ಗಳು  ಹಾಸನ-ಬೇಲೂರು, ಮೂಡಿಗೆರೆ-ಚಾರ್ಮಾಡಿ ಘಾಟ್- ಬೆಳ್ತಂಗಡಿ- ಉಜಿರೆ- ಬಿ.ಸಿ.ರೋಡ್‌, ಮಂಗಳೂರು, ಹಾಸನ-ಸಕಲೇಶಪುರ- ಆನೆಮಹಲ್, ಹಾನ್‌ ಬಾಳ್‌ -ಜೆನ್ನಾಪುರ, ಮೂಡಿಗೆರೆ-ಚಾರ್ಮಾಡಿ ಘಾಟ್-ಬೆಳ್ತಂಗಡಿ -ಉಜಿರೆ, ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ ಕಳಸ- ಕುದುರೆಮುಖ- ಮಾಲಘಾಟ್-ಕಾರ್ಕಳ-ಉಡುಪಿ, ಬಿ.ಸಿ.ರೋಡ್‌, ಮಾಣಿ, ಪುತ್ತೂರು-ಮಡಿಕೇರಿ-ಹುಣಸೂರು, ಶಿವಮೊಗ್ಗ-ಆಯನೂರು-ಹೊಸನಗರ ಮಾಸ್ತಿಕಟ್ಟೆ-ಬಾಳೆಬಾರೆಘಾಟ್-ಹೊಸಂಗಡಿ ಸಿದ್ದಾಪುರ-ಕುಂದಾಪುರ ಮಾರ್ಗದಲ್ಲಿ ಚಲಿಸಬಹುದು.

ಭಾರಿ ವಾಹನಗಳು ಮಂಗಳೂರು- ಬಿ.ಸಿ.ರೋಡು- ಮಾಣಿ, ಪುತ್ತೂರು- ಮಡಿಕೇರಿ ಹುಣಸೂರು, ಕೆ.ಆರ್.ನಗರ-ಹೊಳೆನರಸೀಪುರ-ಹಾಸನ, ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು, ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ, ಮಾಸ್ತಿಕಟ್ಟೆ-ಬಾಳೆಬಾರೆಘಾಟ್, ಹೊಸಂಗಡಿ ಸಿದ್ದಾಪುರ-ಕುಂದಾಪುರ, ಬೆಂಗಳೂರು- ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ-ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು ಮಾರ್ಗದಲ್ಲಿ ಚಲಿಸಬಹುದು ಎಂದು ದ.ಕ.ಜಿಲ್ಲಾಡಳಿತ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry