ಬೆಂಗಳೂರಲ್ಲಿ ಬಿಲ್ಲವ ಸಮಾವೇಶ ‘ಸ್ಪಾರ್ಕ್‌ 2018’

7

ಬೆಂಗಳೂರಲ್ಲಿ ಬಿಲ್ಲವ ಸಮಾವೇಶ ‘ಸ್ಪಾರ್ಕ್‌ 2018’

Published:
Updated:

ಮಂಗಳೂರು: ಬಿಲ್ಲವ ವೃತ್ತಿಪರರ ಸಮಾವೇಶ ‘ಸ್ಪಾರ್ಕ್ 2018' ಬೆಂಗಳೂರಿನ ಬಿಲ್ಲವ ಭವನದಲ್ಲಿ ಇತ್ತೀಚೆಗೆ ನಡೆಯಿತು. ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ‘ಕಾಫಿ ಡೇ’ ಅಧ್ಯಕ್ಷರಾದ ಸದಾನಂದ ಪೂಜಾರಿ ಮಾತನಾಡಿ, ‘ಉನ್ನತ ಗುರಿಯೊಂದಿಗೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ’ ಎಂದು ಹೇಳಿದರು.

ಮಲ್ಲಿಕ್ ಎಂಜಿನಿಯರಿಂಗ್ ಇಂಡಿಯ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಕಾರ್ಯನಿರ್ವಾಹಕ ನಿದೇಶಕರಾಗಿರುವ ಚಂದನ್ ಬಿಲ್ಲವ ಅವರು ಅಧ್ಯಕ್ಷಕೀಯ ಭಾಷಣದಲ್ಲಿ ‘ಯುವಕರು ಹೆಚ್ಚು ಹೆಚ್ಚು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಮತ್ತು ತಂದೆತಾಯಿಗೆ ಗೌರವ ತರುವಂತಾಗಬೇಕು. ಆರ್ಥಿಕ ದುರ್ಬಲರಿಗೆ ವಿದ್ಯಾರ್ಜನೆಗೆ ಸಹಕರಿಸುವುದು ಅಗತ್ಯ’ ಎಂದು ಹೇಳಿದರು.

ಚಲನ ಚಿತ್ರ ನಟಿ ನಿಶ್ಮಿತಾ ಬಾಲಕೃಷ್ಣ, ಪ್ರೊಬೇಷನರಿ ಕೆ.ಎ.ಎಸ್. ಅಧಿಕಾರಿ ಅಜೆಯ್ ವಿಠಲಾಕ್ಷ, ಚಾರ್ಟರ್ಡ್ ಅಕೌಂಟೆಂಟ್ ನಂಜುಂಡ, ವಿದ್ಯಾಧರ್‌, ವಿಜಯಕೃಷ್ಣ ಮಾತನಾಡಿದರು. ನೆಟ್‍ಬಾಲ್ ಪಂದ್ಯದ ರಾಷ್ಟ್ರೀಯ ಆಟಗಾರ ನಿತಿನ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು. 600ಕ್ಕೂ ಹೆಚ್ಚು ವೃತ್ತಿಪರರು ಸಂವಾದದಲ್ಲಿ ಭಾಗವಹಿಸಿದರು. ಲತಿಕಾ ಸಾಲಿಯಾನ್‌ ವಂದಿಸಿದರು. ಶೋಭಿತ್ ಭೋಜರಾಜ್ ಮತ್ತು ಕುಮಾರಿ ಕಲ್ಪಿತಾ ನಿರೂಪಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry