ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.25ರಿಂದ ಕೆರೆಗಳಿಗೆ ನೀರು; ಸಂಸದ

Last Updated 17 ಜನವರಿ 2018, 5:18 IST
ಅಕ್ಷರ ಗಾತ್ರ

ಸರಗೂರು: ತಾರಕ ಜಲಾಶಯದ ಎಡ ಮತ್ತು ಬಲದಂಡೆ ನಾಲೆ ದುರಸ್ತಿಗೊಳಿಸಿ ಫೆ.25ರಿಂದ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಸಂಸದ ಆರ್.ದ್ರುವನಾರಾಯಣ ತಿಳಿಸಿದರು.

ಮಂಗಳವಾರ ಎಚ್.ಡಿ.ಕೋಟೆ ತಾಲ್ಲೂಕಿನ ರೈತರ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಎರಡು ನಾಲೆಗೂ ಏಕಕಾಲದಲ್ಲಿ ನೀರು ಹರಿಸಿ ಕೆರೆ ತುಂಬಿಸಲಾಗುವುದು. ಅಚ್ಚುಕಟ್ಟು ಪ್ರದೇಶದ ರೈತರು ಫಸಲಿಗೆ ಬಳಸದೆ ಕೆರೆ ತುಂಬಲು ಅವಕಾಶ ಮಾಡಬೇಕು. 27 ದಿನಗಳು ಮಾತ್ರ ನೀರು ಬಿಡಲಾಗುವುದು. ಫೆ.25ರಂದು ನೀರು ಬಿಡದಿದ್ದರೆ ಸಂಬಂಧಪಟ್ಟ ಎಂಜನಿಯರ್ ಅವರಿಗೆ ನೋಟಿಸ್ ನೀಡಲಾಗುವುದು ಎಂದರು.

ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ ಮುಗಿದಿದೆ. ಎಡದಂಡೆ ಕಾಮಗಾರಿ ಬಾಕಿ ಇದೆ. ಇದಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ ನೀಡುವಂತೆ ಎಂಜನಿಯರಿಗೆ ಸೂಚಿಸಲಾಗಿದೆ. ನೀರಾವರಿ ಸಚಿವರಿಂದ ಹಣ ಬಿಡುಗಡೆ ಮಾಡಿಸಲಾಗುವುದು ಎಂದರು.

ರೈತರಾದ ಮುಖಂಡ ಹೋ.ಕೆ.ಮಹೇಂದ್ರ, ಜವರಯ್ಯ, ಶಿವಣ್ಣ, ಶ್ಯಾಮಸಂದರ್, ಕ್ಷೀರ ಸಾಗರ್, ಪ್ರಭಾಕರ್ ಮಾತನಾಡಿ, ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಹೀಗಾಗಿ, ಶೀಘ್ರ ನೀರು ಹರಿಸಬೇಕು ಎಂದು ಮನವಿ ಮಾಡಿದರು.

ಕಾವೇರಿ ನೀರಾವರಿ ನಿಗಮದ ಇಇ ಜಗದೀಶ್, ತಾರಕ ಜಲಾಶಯದ ಎಇಇ ನಾಗರಾಜು, ನಟಶೇಖರಮೂರ್ತಿ, ಜೆಡಿಎಸ್ ಮುಖಂಡ ಎಂ.ಸಿ.ದೊಡ್ಡನಾಯಕ, ನರಸಿಂಹೇಗೌಡ, ಎಚ್.ಸಿ.ಲಕ್ಷ್ಮಣ್, ಬೀಮನಹಳ್ಳಿ ಮಹದೇವ್, ಪುರದಕಟ್ಟೆ ಬಸವರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಗಿರಿಗೌಡ, ಸುಂದರನಾಯಕ, ಅಂಕನಾಯಕ, ಇಟ್ನಾ ಕೃಷ್ಣ, ಪಳನಿಸ್ವಾಮಿ, ನಾಗೇಶ್, ಮಲ್ಲಿಕಾರ್ಜುನ, ರೈತರು ಮತ್ತು ನೀರು ಬಳಕೆದಾರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT