ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷೆ ಕಲಿಕೆಯಿಂದ ಆತ್ಮವಿಶ್ವಾಸ ವೃದ್ಧಿ’

Last Updated 17 ಜನವರಿ 2018, 5:33 IST
ಅಕ್ಷರ ಗಾತ್ರ

ಹುಣಸೂರು: ಮಾತೃಭಾಷೆ ಜತೆಗೆ ವಿವಿಧ ಭಾಷೆ ಕಲಿಯುವುದರಿಂದ ವ್ಯಕ್ತಿತ್ವ ವಿಕಸನ ಮತ್ತು ಸಾಮಾನ್ಯಜ್ಞಾನ ಹೆಚ್ಚಲಿದೆ ಎಂದು ಆಂಗ್ಲಭಾಷೆ ಸಂಪನ್ಮೂಲ ವ್ಯಕ್ತಿ, ಕೇಂದ್ರೀಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಎಲ್‌.ನಾಗರಾಜ್‌ ಹೇಳಿದರು. ನಗರದ ಶಾಸ್ತ್ರಿ ಪಬ್ಲಿಕ್‌ ಶಾಲೆಯಲ್ಲಿ ಮಂಗಳವಾರ ನಡೆದ ಇಂಗ್ಲಿಷ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆ ಎಂಬ ಕೆಟ್ಟ ಮಾತು ಉಳಿದಿದೆ. ಇದು ಸತ್ಯಕ್ಕೆ ದೂರವಾದುದು. ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿ ಗಳು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾ ತಕೋತ್ತರ ಪದವಿ ಪಡೆದಿದ್ದಾರೆ. ಇಂಗ್ಲಿಷ್‌ ಕಲಿಕೆ ಸುಲಭವಿದ್ದು, ಈ ಭಾಷೆ ಯಲ್ಲಿ ಅಕ್ಷರಗಳು ಸರಳವಾಗಿವೆ. ಮನಸ್ಸಿಟ್ಟು ಕಲಿಯುವುದರಿಂದ ಭಾಷೆ ಕಲಿಯಬಹು ದಾಗಿದೆ ಎಂದು ಹೇಳಿದರು.

ಭಾಷೆ ಪ್ರತಿಯೊಬ್ಬ ವ್ಯಕ್ತಿಯ ಜೀವನ ರೂಪಿಸುವ ಸಾಧನವಾಗಿ ಬಳಸಿ ಕೊಳ್ಳಲು ಸಹಕಾರಿ ಆಗಲಿದೆ. ಎಲ್ಲ ಭಾಷೆ ಕಲಿತ ವ್ಯಕ್ತಿ ಯಾವುದೇ ರಾಜ್ಯ, ದೇಶದಲ್ಲಿ ಉದ್ಯೋಗ ಮಾಡಬಹುದು. ವಿಶ್ವ ಮಾನ್ಯತೆ ಹೊಂದಿರುವ ಇಂಗ್ಲಿಷ್‌ ಕಲಿಕೆಯಿಂದ ಮಗುವಿನಲ್ಲಿ ಮಾನಸಿಕ ಧೈರ್ಯ ಕಾಣಬಹುದಾಗಿದೆ. ಏನನ್ನಾ ದರೂ ಸಾಧನೆ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಹೊಂದಲು ಅಡಿಪಾಯ ಆಗಲಿದೆ ಎಂದರು.

ಇಂಗ್ಲಿಷ್‌ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಿದಾಕ್ಷಣ ಮಗುವಿಗೆ ಇಂಗ್ಲಿಷ್‌ ಬರೆಯಲು ಅಥವಾ ಮಾತನಾಡಲು ಬರುವುದಿಲ್ಲ. ಮಗುವಿನಲ್ಲಿ ಪೋಷಕರು ಆಸಕ್ತಿ ಹುಟ್ಟು ಹಾಕಬೇಕು. ಹೀಗಾದಲ್ಲಿ ಮಾತ್ರ ಮಗು ಹೊಸ ಭಾಷೆ ಕಲಿಯಲು ಸಹಕಾರಿ ಆಗಲಿದೆ ಎಂದರು.

ಕೆಲವೊಂದು ಪದ ಜೋಡಣೆ, ಭಾಷಾ ಪ್ರಯೋಗ ಕುರಿತು ಪ್ರಸ್ತುತಪಡಿ ಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಂಶುಪಾಲ ರವಿಶಂಕರ್‌, ಮುಖ್ಯ ಶಿಕ್ಷಕಿ ಸತ್ಯವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT