ಬಾಕಿ ಅನುದಾನದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಿ

6

ಬಾಕಿ ಅನುದಾನದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಿ

Published:
Updated:
ಬಾಕಿ ಅನುದಾನದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಿ

ರಾಯಚೂರು: ಜಿಲ್ಲೆಯ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮತ್ತು ಸಿಬ್ಬಂದಿಗೆ ಅದರಲ್ಲೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ, ವ್ಯವಸ್ಥಿತವಾದ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಇದಕ್ಕಾಗಿ ಈ ವರ್ಷ ವೆಚ್ಚವಾಗದೆ ಉಳಿದಿರುವ ಅನುದಾನ ಬಳಕೆಗೆ ಅನುಮತಿ ಕೋರಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗ ಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕ ರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿದರು.

ಉದ್ಯೋಗ ಖಾತರಿ ಯೋಜನೆಯ ಬಾಕಿ ಪಾವತಿಸಬೇಕು. ಸಕಾಲ ಯೋಜನೆಯಡಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು. ಸರ್ಕಾರಿ ಜಮೀನು ಒತ್ತುವರಿದಾರರ ವಿರುದ್ಧ ಪ್ರಕರಣದ ದಾಖಲಿಸಬೇಕು.

ಸಲ್ಲಿಕೆಯಾದ ಅಹವಾಲುಗಳು: ಮಾನ್ವಿ ತಾಲ್ಲೂಕು ಗಣದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚನೂರು ಗ್ರಾಮದ ಕೂಲಿಕಾರ ಮಲ್ಲಯ್ಯ ಅವರು ಖಾತರಿ ಬಾಕಿ ಕೂಲಿ ಪಿಡಿಒ ಪಾವತಿಸುತ್ತಿಲ್ಲ ಎಂದು ದೂರಿದರು. ಜಿಲ್ಲಾ ಪಂಚಾಯಿತಿ ಸಿಇಒ ಅಭಿರಾಂ ಜಿ.ಶಂಕರ್ ಅವರು ದೂರು ಸ್ವೀಕರಿಸಿ, ವಾರದೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವಸತಿ ಇಲ್ಲದೇ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಮನೆ ಸೌಲಭ್ಯ ಕಲ್ಪಿಸುವಂತೆ ತಾಲ್ಲೂಕಿನ ಇಡಪನೂರಿನ ರಾಧಾ ಅವರು ಮನವಿ ಮಾಡಿದರು. ನಿಮ್ಮ ಮನೆಯಲ್ಲಿ ಸರ್ಕಾರಿ ನೌಕರರಿದ್ದು, ಮನೆ ಮಂಜೂರು ಮಾಡಲು ಬರುವುದಿಲ್ಲ. ಖಾಸಗಿ ಬ್ಯಾಂಕ್ ಸಾಲ ಸೌಲಭ್ಯ ಪಡೆಯುವಂತೆ ತಿಳಿಸಿದರು. ವೇತನ ಮತ್ತು ಜಮೀನು ದಾಖಲೆಗಳ ಆಧಾರದಡಿ ಗೃಹ ಸಾಲ ನೀಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ರಾಯಚೂರು ತಾಲ್ಲೂಕಿನ ಮರ್ಚೆಡ್ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಸರ್ಕಾರಿ ಜಮೀನು ಒತ್ತುವರಿ ಜತೆಗೆ ದುರ್ಬಳಕೆ ಆಗಬಾರದು. ಅಗತ್ಯವಾದರೆ ಪ್ರಕರಣ ದಾಖಲಿಸಿ ಅದನ್ನು ತಡೆಯಿರಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.

ಅತಿಕ್ರಮ ತೆರವಿಗೆ ಸೂಚನೆ: ರಾಯಚೂರು ನಗರಸಭೆ ಕೆಲವು ಸದಸ್ಯರು ಸರ್ಕಾರಿ ಜಮೀನು ಅತಿಕ್ರಮಿಸಿ ನಿವೇಶನಗಳನ್ನಾಗಿ ಪರಿ ವರ್ತಿಸುತ್ತಿದ್ದಾರೆ ಎಂಬ ದೂರು ಕೇಳಿ ಬಂತು.

‘ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಇಲಾಖೆಯಲ್ಲಿ ಪಟ್ಟಾ ಮಾಡಿಸುತ್ತಿದ್ದಾರೆ. ಹೀಗಾಗಿ ನಗರಸಭೆಯಿಂದ ಫಾರಂ ನಂ.3 ನೀಡುವವರೆಗೆ ಆಸ್ತಿ ಹೆಸರಿಗೆ ಮಾಡದಂತೆ ಸೂಚನೆ ನೀಡಲಾಗಿದೆ’ ಎಂದು ಎಂದು ನಗರಸಭೆ ಆಯುಕ್ತ ರಮೇಶ ತಿಳಿಸಿದರು. ಅಂಥವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಡಿಸಿ ಸೂಚಿಸಿದರು.

ಅತಿಕ್ರಮ ತೆರವಿಗೆ ಸೂಚನೆ

ರಾಯಚೂರು ನಗರಸಭೆ ಕೆಲವುಸದಸ್ಯರು ಸರ್ಕಾರಿ ಜಮೀನು ಅತಿಕ್ರಮಿಸಿ ನಿವೇಶನಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂಬ ದೂರು ಕೇಳಿ ಬಂತು. ‘ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಇಲಾಖೆಯಲ್ಲಿ ಪಟ್ಟಾ ಮಾಡಿಸುತ್ತಿದ್ದಾರೆ.

ಹೀಗಾಗಿ ನಗರಸಭೆಯಿಂದ ಫಾರಂ ನಂ.3 ನೀಡುವವರೆಗೆ ಆಸ್ತಿ ಹೆಸರಿಗೆ ಮಾಡದಂತೆ ಸೂಚನೆ ನೀಡಲಾಗಿದೆ’ ಎಂದು ಎಂದು ನಗರಸಭೆ ಆಯುಕ್ತ ರಮೇಶ ತಿಳಿಸಿದರು. ಅಂಥವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಡಿಸಿ ಸೂಚಿಸಿದರು.

* * 

ಸಕಾಲ ಯೋಜನೆ ಕಳೆದ ವರ್ಷ ಸಮರ್ಪಕವಾಗಿ ಜಾರಿಯಾಗಿಲ್ಲ. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ವಾರದೊಳಗೆ ನೋಂದಾಯಿಸಬೇಕು. ವಿಳಂಬ ಮಾಡಿದವರಿಗೆ ನೋಟಿಸ್ ನೀಡಲಾಗುವುದು.

ಡಾ.ಬಗಾದಿ ಗೌತಮ್‌

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry