ಅಹಮದಾಬಾದ್ ತಲುಪಿದ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ದಂಪತಿ

7
8ಕಿ.ಮೀ ರೋಡ್‌ ಶೋ

ಅಹಮದಾಬಾದ್ ತಲುಪಿದ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ದಂಪತಿ

Published:
Updated:
ಅಹಮದಾಬಾದ್ ತಲುಪಿದ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ದಂಪತಿ

ಅಹಮದಾಬಾದ್: ಪ್ರಧಾನಿ ಮೋದಿ ಅವರು ತಮ್ಮ ತವರು ರಾಜ್ಯವಾದ ಗುಜರಾತಿನ ಅಹಮದಾಬಾದ್‌ಗೆ ಬಂದಿಳಿದ  ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ದಂಪತಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.

ಪ್ರಧಾನಿ ಜತೆಗೂಡಿ  ನೆತನ್ಯಾಹು ದಂಪತಿ ಅಹಮದಾಬಾದ್‌ನಲ್ಲಿ  8 ಕಿ.ಮೀ ರೋಡ್ ಶೋ  ನಡೆಸಿದ ಬಳಿಕ ಸಬರಾಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ರಾಷ್ಟ್ರಪಿತ ಮಹಾತ್ಮಗಾಂಧಿಗೆ ಗೌರವ ಸಲ್ಲಿಸಿದ ಬೆಂಜಾಮಿನ್‌ ನೆತನ್ಯಾಹು ದಂಪತಿ ಚರಕದಿಂದ ನೂಲು ತೆಗೆಯಲು ಪ್ರಯತ್ನಿಸಿದ್ದಾರೆ. 

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಅವರು ಹೊರದೇಶಗಳ ಮುಖ್ಯಸ್ಥರಿಗೆ ತವರು ನೆಲದಲ್ಲಿ ಅದ್ಧೂರಿ ಸ್ವಾಗತ ನೀಡುತ್ತಿರುವುದು ಇದು ಮೂರನೇ ಬಾರಿ. ಈ ಮೊದಲು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರಿಗೆ ಭರ್ಜರಿ ಆತಿಥ್ಯ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry