ಫೆ.21ರಂದು ಪಕ್ಷದ ಹೆಸರು ಘೋಷಣೆ: ಕಮಲ್ ಹಾಸನ್

7

ಫೆ.21ರಂದು ಪಕ್ಷದ ಹೆಸರು ಘೋಷಣೆ: ಕಮಲ್ ಹಾಸನ್

Published:
Updated:
ಫೆ.21ರಂದು ಪಕ್ಷದ ಹೆಸರು ಘೋಷಣೆ: ಕಮಲ್ ಹಾಸನ್

ಚೆನ್ನೈ: ನಟ ಕಮಲ್‌ ಹಾಸನ್ ಅವರು ತಮ್ಮ ಹೊಸ ಪಕ್ಷದ ಹೆಸರನ್ನು ಫೆ.21ರಂದು ಘೋಷಿಸುವುದಾಗಿ ಹೇಳಿದ್ದಾರೆ.

ಅದೇ ದಿನ ತಮ್ಮ ಹುಟ್ಟೂರಾದ ತಮಿಳುನಾಡಿನ ರಾಮನಾಥಪುರಂನಿಂದ ರಾಜ್ಯದಾದ್ಯಂತ ಪ್ರವಾಸ ಆರಂಭಿಸಲಿರುವ ಕಮಲ್ ಹಾಸನ್ ಅವರು ಮಧುರೈ, ದಿಂಡಿಗಲ್, ಶಿವಗಂಗೈಗೆ ಭೇಟಿ ನೀಡಲಿದ್ದಾರೆ.

ಈ ಬಗ್ಗೆ ಮಾತನಾಡಿದ ಕಮಲ್ ಹಾಸನ್ ಅವರು, ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಜನರ ಅವಶ್ಯಕತೆ ತಿಳಿದುಕೊಳ್ಳುವೆ. ಅವರ ಸಂಕಷ್ಟಗಳನ್ನು ತಿಳಿದುಕೊಳ್ಳುವೆ. ಜನರ ಆಸೆ–ಆಕಾಂಕ್ಷೆಗಳ ಬಗ್ಗೆ ಗಮನ ಹರಿಸುವೆ. ಈ ಪ್ರವಾಸವು ತಮಿಳುನಾಡು ರಾಜ್ಯದ ಜನರ ಅಗತ್ಯತೆಗಳನ್ನು ಅರಿಯಲು ಅನುಕೂಲವಾಗಲಿದೆಎಂದಿದ್ದಾರೆ.

ಅಲ್ಲದೇ ಇದೇ ವೇಳೆ ಹೊಸ ಪಕ್ಷದ ಹೆಸರು, ಆಶಯಗಳು, ಉದ್ದೇಶಗಳನ್ನು ಫೆ.21ರಂದು ಬಹಿರಂಗಪಡಿಸುವೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry