ಕಲಬುರ್ಗಿ: ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಷಿಪ್‌ ಆರಂಭ

7

ಕಲಬುರ್ಗಿ: ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಷಿಪ್‌ ಆರಂಭ

Published:
Updated:
ಕಲಬುರ್ಗಿ: ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಷಿಪ್‌ ಆರಂಭ

ಕಲಬುರ್ಗಿ: ಇಲ್ಲಿನ ಡಾ. ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಹಮ್ಮಿಕೊಂಡಿರುವ ವಲಯ ಮಟ್ಟದ ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಷಿಪ್ ಅನ್ನು ಬುಧವಾರ ವಿದ್ಯಾರ್ಥಿಗಳು ಉದ್ಘಾಟಿಸಿದರು.

ಯಾದಗಿರಿ ಜಿಲ್ಲೆಯ ಶಹಾಪುರದ ಎಸ್.ಎಂ.ಸಿ ಜೈನ್ ಶಾಲೆಯ ಅಮೃತಾ ಹೊಳ್ಳ, ಯಾದಗಿರಿ ಡಾನ್ ಬಾಸ್ಕೊ ಶಾಲೆಯ ರಾಹುಲ್ ಚವಾಣ್, ಕಲಬುರ್ಗಿಯ ಮಹಾದೇವಿ ಪ್ರೌಢಶಾಲೆಯ ಸ್ನೇಹಾ ಹೆಬ್ಬಾಳ, ಯಾದಗಿರಿ ಜಿಲ್ಲೆ ಶಹಾಪುರದ ಆದರ್ಶ ವಿದ್ಯಾಲಯದ ಹಾಜಿ ರಾಠೋಡ ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಷಿಪ್ ಅನ್ನು ಉದ್ಘಾಟಿಸಿದರು.

ಮೊದಲ ಹಂತದ ಆಯ್ಕೆ ಸ್ಪರ್ಧೆ ಆರಂಭವಾಗಿದೆ. ಇಡೀ ಸಭಾಂಗಣ ಭರ್ತಿಯಾಗಿದ್ದು, ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರು, ಶಿಕ್ಷಕರೂ ಕೂಡ ಅಷ್ಟೇ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಕಲಬುರ್ಗಿ ವಲಯ ಮಟ್ಟದ ಕ್ವಿಜ್ ಚಾಂಪಿಯನ್‌ಷಿಪ್‌ನಲ್ಲಿ ಕಲಬುರ್ಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳ 50 ಪ್ರೌಢಶಾಲೆಗಳ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry