ಭರವಸೆ ಈಡೆರಿಸಿದ್ದೇನೆ ಮತ್ತೆ ಆಶೀರ್ವದಿಸಿ

7

ಭರವಸೆ ಈಡೆರಿಸಿದ್ದೇನೆ ಮತ್ತೆ ಆಶೀರ್ವದಿಸಿ

Published:
Updated:

ಇಂಡಿ: ತಾಲ್ಲೂಕಿನ ಹಿರೇಬೇವನೂರ-ಅಗರಖೇಡ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ, ಶಾದಿ ಮಹಲ್ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ನೆರವೇರಿಸಿದರು.

ನಂತರ ಅವರು ಮಾತನಾಡಿ, ‘ಅಗರಖೇಡ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ₹ 50 ಲಕ್ಷ, ಹಿರೇಬೇವನೂರ ಗ್ರಾಮದಲ್ಲಿ ಶಾದಿಮಹಲ್ ಕಟ್ಟಡಕ್ಕೆ ₹ 1 ಕೋಟಿ ಮಂಜೂರಾಗಿದೆ’ ಎಂದು ತಿಳಿಸಿದರು.

ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರುಕ್ಮುದ್ದೀನ್ ತದ್ದೇವಾಡಿ, ತಾಲ್ಲೂಕು ಮಾಳಿ ಸಮುದಾಯದ ಅಧ್ಯಕ್ಷ ಹೊನ್ನಪ್ಪ ಮೇತ್ರಿ, ಬಸವರಾಜ ಉಪ್ಪಿನ, ಬಸವರಾಜ ಸೋಲಾಪೂರ, ರಮೇಶ ತಮಶೆಟ್ಟಿ, ಬಾಗನಗೌಡ ಪಾಟೀಲ, ವಿವೇಕಾನಂದ ಡಪಳಪೂರ, ರಶೀದ ಅರಬ, ಮುತ್ತಪ್ಪ ಪೋತೆ, ಪ್ರಶಾಂತ ಕಾಳೆ. ಜಾವೀದ ಮೋಮಿನ್ ಸ್ವಾಗತಿಸಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry