ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ₹ 20 ಕೋಟಿ ದೇಣಿಗೆ

7

ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ₹ 20 ಕೋಟಿ ದೇಣಿಗೆ

Published:
Updated:
ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ₹ 20 ಕೋಟಿ ದೇಣಿಗೆ

ಕೂಡಲಸಂಗಮ: ಚುನಾವಣೆಯ ಹೊಸ್ತಿಲಲ್ಲೇ ರಾಜ್ಯ ರಾಜಕೀಯದಲ್ಲಿ ಹೊಸದೊಂದು ಅಲೆಯನ್ನು ಹುಟ್ಟು ಹಾಕುವ ದೃಷ್ಟಿಯಿಂದ ಕಳಸಾ ಬಂಡೂರಿ ಹೋರಾಟಗಾರರು ನೂತನ ಪಕ್ಷವನ್ನು ಹುಟ್ಟು ಹಾಕಿದೆ. ಅಭಿವೃದ್ದಿ ಪರ -ಭ್ರಷ್ಟಾಚಾರ ವಿರೋಧಿ ಸಂಕಲ್ಪವನ್ನು ಹೊತ್ತಿರುವ ಈ ಪಕ್ಷ ಜನ ಸಾಮಾನ್ಯರಿಂದ ಜನ ಸಾಮಾನ್ಯರಿಗೋಸ್ಕರ ಪ್ರಾರಂಭವಾಗಿರುವ ಪಕ್ಷವಾಗಿದೆ ಎಂದು ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಡಾಅಯ್ಯಪ್ಪ ರಾಮಣ್ಣ ದೊರೆ ಹೇಳಿದರು.

ಕೂಡಲಸಂಗಮದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ ಚುನಾವಣೆಯ ಸಂಧರ್ಭದಲ್ಲಿ ಮಾತ್ರ ಸಮಸ್ಯೆಗಳ ಬಗ್ಗೆ ದನಿ ಎತ್ತುವ ರಾಜಕೀಯ ಪಕ್ಷಗಳ ಬಗ್ಗೆ ಬೇಸರವಾಗಿದೆ. ಕೇವಲ ರಾಜಕೀಯ ಹಿತಾಸಕ್ತಿಯಿದ್ದಿದ್ದಲ್ಲಿ ಕಳಸಾ ಬಂಡೂರಿ ಯೋಜನೆ ಯಾವಾಗಲೋ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ರಾಜಕೀಯ ಪಕ್ಷಗಳ ಅನಾದರ ಹಾಗೂ ಪಕ್ಷಗಳ ಹಿತಾಸಕ್ತಿಯ ಮುಂದೆ ಜನರ ಸಮಸ್ಯೆಗಳನ್ನು ಕಡೆಗಣಿಸುವ ಪರಿಪಾಠದಿಂದ ನಾವು ಬೇಸತ್ತು ಹೋಗಿದ್ದೇವೆ ಎಂದು ದೂರಿದರು.

ಗೋವಾ ಸಚಿವರನ್ನು ನಮ್ಮ ರಾಜ್ಯದಲ್ಲಿ ಪರಿಶೀಲನೆಗೆ ಬಿಟ್ಟಿದ್ದು ಮೂರ್ಖತನ. ನಮ್ಮ ರಾಜ್ಯದ ಜನರು ಗೋವಾ ರಾಜ್ಯದಲ್ಲಿ ಪರಿವೀಕ್ಷಣೆಗೆ ಹೋಗುವುದಾದಲ್ಲಿ ಅವರು ಅವಕಾಶ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ಈ ಹಿನ್ನಲೆಯಲ್ಲಿ ನಮ್ಮ ಹೋರಾಟಕ್ಕೆ ಬಲ ತುಂಬುವಂತಹ ರಾಜಕೀಯ ಪಕ್ಷದ ಅವಶ್ಯಕತೆಯನ್ನು ಮನಗೊಂಡಿರುವ ನಾವು ಶಿಕ್ಷಣ ತಜ್ಞ ಡಾ ಅಯ್ಯಪ್ಪ ನೇತೃತ್ವದಲ್ಲಿ ಜನ ಸಾಮಾನ್ಯರ ಪಕ್ಷವನ್ನು ಹುಟ್ಟು ಹಾಕಿದ್ದೇವೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪಧರ್ಿಸಲು ನಿರ್ಧರಿಸಿದ್ದೇವೆ ಎಂದರು.

ರಾಜ್ಯದ ಗಡಿಯ ಭಾಗದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯಾವುದೆ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ. ಆದರೂ ಕೂಡಾ ರಾಜ್ಯ ಸರ್ಕಾರ ಅನುಮತಿ ನೀಡಿದಲ್ಲಿ ರೈತರ ಸಹಾಯ ಹಾಗೂ ನೇತೃತ್ವದಲ್ಲಿ ಕಳಸಾ ಬಂಡೂರಿ ಕಾಮಗಾರಿ ಪೂರ್ಣಗೊಳಿಸಲು ನಮ್ಮ ಪಕ್ಷ ಸಿದ್ಧವಿದೆ. ನಮ್ಮ ಪಕ್ಷದ ವತಿಯಿಂದ ₹ 20 ಕೋಟಿ ರೂಪಾಯಿ ದೇಣಿಗೆ ನೀಡಲು ಸಿದ್ದ ಎಂದು ಘೋಷಿಸಿದರು.

ಚಂಪಾ ಚುನಾವಣೆಗೆ ನಿಲ್ಲುವರೆ?

ಕೂಡಲಸಂಗಮ: ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಸೂಕ್ಷ್ಮವಾಗಿ ಇಂಗಿತ ವ್ಯಕ್ತಪಡಿಸಿದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ. ಕೂಡಲಸಂಗಮದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಾಜಕೀಯ ನಿರ್ಧಾರ ಕೈಗೊಳ್ಳುವ ವಿಚಾರ ಮುಂದೆ ಬಂದೆ ಬರುತ್ತೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದವಾಗಿರುತ್ತೇನೆ. ನಾನು ಚುನಾವಣೆಗೆ ಸ್ಪರ್ಧೆ ಮಾಡೋದು ವೈಯಕ್ತಿಕ ವಿಚಾರವಲ್ಲ, ಪಕ್ಷ ಮುಂದೆ ನಿರ್ಧರಿಸಿದಂತೆ ನಿರ್ಧಾರ. ನಾನು ಇಡೀ ಕರ್ನಾಟಕದ ಮನುಷ್ಯ ಎಂದರು.

ಒಟ್ಟಾರೆ ರಾಜ್ಯದ ಹಿತಾಸಕ್ತಿ ನನ್ನ ಆಶೆ. ರಾಷ್ಟ್ರೀಯ ಪಕ್ಷಗಳ ಜಟಾಪಟಿ ಮಧ್ಯೆ ನಮ್ಮ ನೆಲ, ಜಲ, ಶಿಕ್ಷಣ ಬೇಕಾದರೆ ಹೊಸ ಪ್ರಾದೇಶಿಕ ಪಕ್ಷ ಅನಿವಾರ್ಯ. ಆಂಧ್ರ, ತಮಿಳುನಾಡು ಮಾದರಿಯಂತೆ ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಅವಶ್ಯ. ಮಹಾದಾಯಿ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ ಇದ್ದಾಗಿದ್ದು ಸಂಕ್ರಮಣದಲ್ಲಿ ಬಂದದ್ದು ಸ್ವಾಗಾತರ್ಹ ಎಂದರು.

ಮಹಾದಾಯಿಗಾಗಿ ಹೋರಾಟ ನಡೆಸಿದ್ರೂ ಪ್ರಯೋಜನವಾಗಲಿಲ್ಲ. ಹೀಗಾಗಿ ರೈತರು ಹೊಸ ಪಕ್ಷದೊಟ್ಟಿಗೆ ಮುನ್ನಡೆಯುತ್ತಿದ್ದಾರೆ. ಚುನಾವಣೆಯಲ್ಲಿ ಅಧಿಕಾರ ಹಿಡಿದು ಸಮಸ್ಯೆ ಇತ್ಯರ್ಥಕ್ಕಾಗಿ ಯತ್ನಿಸುವುದು.  ಳವಳಿ ಮೂಲಕ ಪಕ್ಷ ಮುನ್ನೆಡೆಸುವುದು ನಮಮ ಆದ್ಯತೆ ಆಗಿದೆ ಎಂದರು. ಗೋವಾ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ.ಇದನ್ನು ಎಲ್ಲರು ಒಗ್ಗಟಾಗಿ ಖಂಡಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry