‘ಪಂಚಾಚಾರ್ಯರು ಲಿಂಗಾಯತರಾಗಲು ಸಾಧ್ಯವಿಲ್ಲ’

7

‘ಪಂಚಾಚಾರ್ಯರು ಲಿಂಗಾಯತರಾಗಲು ಸಾಧ್ಯವಿಲ್ಲ’

Published:
Updated:

ಕೂಡಲಸಂಗಮ: ಬಸವಣ್ಣನವರನ್ನು ಧರ್ಮ ಸ್ಥಾಪಕರೆಂದು ಒಪ್ಪಿಕೊಳ್ಳದ ಪಂಚಪೀಠಾಧೀಶರಿಗೆ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟಲಿಂಗವನ್ನು ಕೊರಳಲ್ಲಿ ಧರಿಸಿಕೊಂಡು ರುದ್ರಾಭಿ ಷೇಕ, ಹೋಮ, ಯಾಗ, ಯಜ್ಞ ಮಾಡು ವುದು ಧರ್ಮದ್ರೋಹದ ಕೆಲಸ ಎಂದು ಬಸವಾದಿ ಶರಣರು ಖಂಡಿಸಿದ್ದಾರೆ. ಅದನ್ನು ಪ್ರತಿನಿತ್ಯವೂ ಮಾಡುವ ಪಂಚಪೀಠಾಧೀಶರು ಲಿಂಗಾಯತರಾ ಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ವೀರಶೈವ ಪಂಚಾ ಚಾರ್ಯರು ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಇವನ್ನು ಬೇರ್ಪಡಿಸುವುದರಿಂದ ಸಮಾಜ ಒಡೆಯುತ್ತದೆ ಎನ್ನುತ್ತಾರೆ. ವೀರಶೈವ ಲಿಂಗಾಯತಕ್ಕೆ ಮಾನ್ಯತೆ ಕೊಡುವುದಾದರೆ ತಮ್ಮ ಒಪ್ಪಿಗೆ ಇದೆ ಎಂದು ಒಮ್ಮೆ ಹೇಳುತ್ತಾರೆ. ನಾವು ಸನಾತನ ಹಿಂದೂ ಧರ್ಮದ ಅನು ಯಾಯಿಗಳು ಎಂದು ಮತ್ತೊಮ್ಮೆ ಹೇಳು ತ್ತಾರೆ. ಅವರಲ್ಲಿ ತಾತ್ತ್ವಿಕ ಖಚಿತತೆ ಇಲ್ಲ. ವಿನಾಕಾರಣ ಲಿಂಗಾಯತ ಧರ್ಮದ ಮಾನ್ಯತೆಗೆ ಅಡ್ಡಿಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಂಚಾಚಾರ್ಯ ಸ್ವಾಮಿಗಳು ತಾವು ಸನಾತನ ಧರ್ಮದ ಅನುಯಾಯಿಗಳು ಎಂದು ಹೇಳುತ್ತಾರೆ. ಅವರ ಶಿಷ್ಯರೇ ಆಗಿರುವ ವೀರಶೈವ ಮಹಾಸಭಾದ ಪದಾಧಿಕಾರಿಗಳು ನಾವು ಸನಾತನ ಹಿಂದೂ ಧರ್ಮದ ಅನುಯಾಯಿಗಳಲ್ಲ, ನಮ್ಮದು ವೀರಶೈವ ಲಿಂಗಾಯತ ಧರ್ಮ ಎನ್ನುತ್ತಾರೆ. ಇಂಥ ದ್ವಂದ್ವ ನಿಲುವಿನ ವೀರಶೈವ ಮಹಾಸಭಾವನ್ನು ಲಿಂಗಾಯತ ಸಮಾಜ ಬಹಿಷ್ಕರಿಸಬೇಕು ಎಂದರು.

ವೀರಶೈವ ಮಹಾಸಭಾ ಸದಸ್ಯತ್ವ ಹೊಂದಿರುವ ಲಿಂಗಾಯತ ಸದಸ್ಯರು, ಪದಾಧಿಕಾರಿಗಳು, ಬಸವ ಭಕ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಬರಬೇಕು. ಲಿಂಗಾಯತರ ಒಳಿತಿಗಾಗಿಯೇ ಸ್ಥಾಪಿಸಲಾದ ಲಿಂಗಾಯತ ಧರ್ಮ ಮಹಾಸಭೆಗೆ ಎಲ್ಲರೂ ಸದಸ್ಯರಾಗಿ ಎಂದು ಕರೆಕೊಟ್ಟರಲ್ಲದೆ ಎಸ್.ಎಂ.ಜಾಮದಾರ ಮುಂತಾದ ಗಣ್ಯರು ಸೇರಿ ಸ್ಥಾಪಿಸುತ್ತಿರುವ ವಿಶ್ವ ಲಿಂಗಾಯತ ಪರಿಷತ್ತಿಗೆ ನಮ್ಮ ಬೆಂಬಲವಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry