ಕೆಂಪನಪುರ: ಸಂಭ್ರಮ ಮೂಡಿಸಿದ ಸುಗ್ಗಿ–ಹುಗ್ಗಿ

7

ಕೆಂಪನಪುರ: ಸಂಭ್ರಮ ಮೂಡಿಸಿದ ಸುಗ್ಗಿ–ಹುಗ್ಗಿ

Published:
Updated:

ಸಂತೇಮರಹಳ್ಳಿ: ಸಮೀಪದ ಕೆಂಪನಪುರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷಿ ಇಲಾಖೆಯಿಂದ ಸೋಮವಾರ ಸುಗ್ಗಿ–ಹುಗ್ಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಕ್ರಾಂತಿ ಹಬ್ಬದ ದಿನದಂದೇ ಸುಗ್ಗಿ–ಹುಗ್ಗಿ ಕಾರ್ಯಕ್ರಮ ಆಚರಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಗ್ರಾಮಸ್ಥರೂ ಸಡಗರದಿಂದ ಪಾಲ್ಗೊಂಡಿದ್ದರು. ಜತೆಗೆ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆ ನಡೆಸುವ ಮೂಲಕ ಹಬ್ಬದ ದಿನದಂದು ಗ್ರಾಮಸ್ಥರಿಗೆ ಮನರಂಜನೆ ನೀಡಿದವು.

ಕಬ್ಬು, ಮಾವಿನಸೊಪ್ಪು, ಹೂವು, ಹೊಂಬಾಳೆಗಳಿಂದ ಸಿಂಗರಿಸಿದ ಗಾಡಿಗಳಿಗೆ ಗ್ರಾಮಸ್ಥರು ತಾವು ಬೆಳೆದ ಧಾನ್ಯಗಳನ್ನು ತುಂಬಿ, ಸಿಂಗರಿಸಿದ ಎತ್ತುಗಳನ್ನು ಕಟ್ಟಿ ಗ್ರಾಮದಲ್ಲೆಲ್ಲ ಮೆರವಣಿಗೆ ನಡೆಸಿದರು. ಅದರ ಜೊತೆಗೆ, ಕಲಾತಂಡಗಳು, ವಾದ್ಯ ಮೇಳಗಳು, ತಮಟೆ ವಾದನಗಳು ಸದ್ದು ಮಾಡುತ್ತಾ ಸಾಗಿದವು. ಗ್ರಾಮಸ್ಥರೂ ಸಹ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಹೆಜ್ಜೆ ಹಾಕಿದರು.

ವೀರಗಾಸೆ ಕುಣಿತ, ಗೊರವರ ಕುಣಿತ, ಮಾರಿಕುಣಿತಗಳು ಹಾಗೂ ಹುಲಿವೇಷಧಾರಿಗಳು ಗಮನಸೆಳೆದವು. ವೇದಿಕೆಯಲ್ಲಿ ಆಲ್ಕೆರೆ ಅಗ್ರಹಾರದ ಶಿವಕುಮಾರ್ ಮತ್ತು ತಂಡದವರು ಮಂಟೇಸ್ವಾಮಿ ಹಾಗೂ ಮಹದೇಶ್ವರರ ನೀಲಗಾರ ಪದಗಳನ್ನು ಹಾಡಿ ತಲೆದೂಗುವಂತೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್. ಜಯಣ್ಣ ಮಾತನಾಡಿ, ಗ್ರಾಮದಲ್ಲಿ ನಡೆದ ಸುಗ್ಗಿ–ಹುಗ್ಗಿ ಕಾರ್ಯಕ್ರಮದಿಂದ ಗ್ರಾಮೀಣ ಜನಪದ ಅನಾವರಣಗೊಂಡಿದೆ. ಇದು ಹಿಂದೆ ಗ್ರಾಮಗಳಲ್ಲಿ ಸುಗ್ಗಿಯ ದಿನಗಳಲ್ಲಿ ಹಾಡುತ್ತಿದ್ದ ಜಾನಪದ ಹಾಡುಗಳು ನೆನಪಿಗೆ ಬರುತ್ತಿವೆ. ಇವುಗಳನ್ನು ಇಂದಿನ ತಲೆಮಾರು ನಶಿಸದಂತೆ ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.

ಅತಿವೃಷ್ಟಿ, ಅನಾವೃಷ್ಟಿ ಪ್ರಕೃತಿಯ ನಿಯಮಗಳಾಗಿರುವುದರಿಂದ ರೈತರು ಬದಲಾವಣೆಗೆ ಹೊಂದಿಕೊಂಡು ಕೃಷಿ ಚಟುವಟಿಕೆಯನ್ನು ಮುಂದುವರಿಸಿ ಕೊಂಡು ಬರಬೇಕಾಗಿದೆ. ಕೃಷಿ ಇಲಾಖೆಯವರು ರೈತರಿಗಾಗಿ ಹೊಸ ಅವಿಷ್ಕಾರಗಳನ್ನು ಪರಿಚಯಿಸುತ್ತಿದ್ದಾರೆ. ಇವರ ಸಲಹೆ ಸೂಚನೆಗಳನ್ನು ಪಾಲಿಸಿ ಕೊಂಡು ವೈಜ್ಞಾನಿಕವಾಗಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಡರಾಗಬೇಕು ಎಂದು ಸಲಹೆ ನೀಡಿದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಸಿರಿಧಾನ್ಯಗಳನ್ನು ಬೆಳೆಯುವಂತೆ ರೈತರಲ್ಲಿ ಮನವಿ ಮಾಡಿದರು. ಜಿಲ್ಲಾಪಂಚಾಯಿತಿ ಉಪಾಧ್ಯಕ್ಷ ಯೋಗೀಶ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹದೇವಯ್ಯ ಮಾತನಾಡಿದರು.

ತಾ. ಪಂ. ಅಧ್ಯಕ್ಷ ಎಚ್ವಿ.ಚಂದ್ರು, ಉಪಾಧ್ಯಕ್ಷ ದಯಾನಿಧಿ, ಗ್ರಾ.ಪಂ. ಅಧ್ಯಕ್ಷ ಗುರುಸಿದ್ದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ. ಪುಟ್ಟಬುದ್ಧಿ, ಕೆ.ಎಂ. ಶಿವಶಂಕರ್, ಶ್ರೀಕಂಠಸ್ವಾಮಿ, ಕೆ.ಎಂ.ನಾಗರಾಜು, ಸೋಮಶೇ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry