ಕೊಡಗವಳ್ಳಿ ಹಟ್ಟಿ: ದೊಡ್ಡ ಮಾರಿಕಾಂಬ ದೇವಿ ಜಾತ್ರೆ ಇಂದಿನಿಂದ

7

ಕೊಡಗವಳ್ಳಿ ಹಟ್ಟಿ: ದೊಡ್ಡ ಮಾರಿಕಾಂಬ ದೇವಿ ಜಾತ್ರೆ ಇಂದಿನಿಂದ

Published:
Updated:

ಚಿಕ್ಕಜಾಜೂರು: ಸಮೀಪದ ಕೊಡಗವಳ್ಳಿಹಟ್ಟಿ ಗ್ರಾಮದಲ್ಲಿ 10 ವರ್ಷಗಳಿಗೊಮ್ಮೆ ನಡೆಯುವ ದೊಡ್ಡ ಮಾರಿಕಾಂಬ ದೇವಿ ಜಾತ್ರೆ ಬುಧವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಮಂಗಳವಾರ ರಾತ್ರಿ 10ಕ್ಕೆ ದೇವಿಯನ್ನು ಅಲಂಕರಿಸಿ ಗದ್ದುಗೆ ಮೇಲೆ ಪ್ರತಿಷ್ಠಾಪಿಸಲಾಯಿತು. ತಡರಾತ್ರಿಯಲ್ಲಿ ಗ್ರಾಮದ ಸುತ್ತ ಸರಗವನ್ನು ಹಾಕಲಾಯಿತು.

ಜ. 17ರಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರಿಂದ ಎಡೆ ಬಿಡಾರವನ್ನು ಸಲ್ಲಿಸುತ್ತಾರೆ. ಜ. 18ರಂದು ಮಧ್ಯಾಹ್ನ 1 ಗಂಟೆಗೆ ಸಕಲ ವಾದ್ಯಗೋಷ್ಠಿಗಳೊಂದಿಗೆ ದೇವಿಗೆ ಪೋತರಾಜರಿಂದ ಗಂಗಾ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ಗಾವು ಕಾರ್ಯಕ್ರಮ ನಡೆಯಲಿದೆ.

ಜ. 19ರಂದು ರಾತ್ರಿ ನಾಟಕ ಪ್ರದರ್ಶನ ನಡೆಯಲಿದೆ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ಜಾತ್ರೆಯ ಸಮಿತಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry