ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಶ್ರಮದಾನ; ಶೌಚಾಲಯ ನಿರ್ಮಾಣ

Last Updated 17 ಜನವರಿ 2018, 9:11 IST
ಅಕ್ಷರ ಗಾತ್ರ

ನರೇಗಲ್: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಶಿಬಿರಾರ್ಥಿಗಳು, ಉಪನ್ಯಾಸಕರ ಮಾರ್ಗದರ್ದಶನ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಜಕ್ಕಲಿ ಗ್ರಾಮದ ಜನರಿಗೆ ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಮೂಲಕ ವಿಶಿಷ್ಟ ಸೇವೆ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ನಡೆಯುತ್ತಿರುವ ಆರು ದಿನಗಳ ಶಿಬಿರವನ್ನು ಸಂಪೂರ್ಣ ಶೌಚಾಲಯ ನಿರ್ಮಾಣ ಮಾಡುವುದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಗ್ರಾಮ ಪಂಚಾಯ್ತಿ ಶೌಚಾಲಯ ನಿರ್ಮಾಣಕ್ಕೆ ಬೇಕಾಗುವ ವೆಚ್ಚವನ್ನು ಭರಿಸಿ ಸಹಕರಿಸುತ್ತಿದೆ. ಶೌಚಾಲಯ ನಿರ್ಮಾಣ, ಬಳಕೆಯ ಮಹತ್ವವನ್ನು ಗ್ರಾಮಸ್ಥರಿಗೆ ತಿಳಿಸುತ್ತಿರುವ ವಿದ್ಯಾರ್ಥಿಗಳು ಈಗಾಗಲೇ 15 ಶೌಚಾಲಯಗಳನ್ನು ನಿರ್ಮಿಸಿ ಗ್ರಾಮಸ್ಥರ ಮೆಚ್ಚುಗೆ ಪಡೆದಿದ್ದಾರೆ.

‘ವಿದ್ಯಾರ್ಥಿಗಳೊಂದಿಗೆ ಶೌಚಾಲಯ ನಿರ್ಮಿಸುವಲ್ಲಿ ಸಹಕರಿಸುತ್ತಿರುವ ಶಿಕ್ಷಕರೂ ಸಹ ಕೂಲಿ ಕಾರ್ಮಿಕರಂತೆ ಕೆಲಸ ಮಾಡುತ್ತಿದ್ದಾರೆ. ಶೌಚಾಲಯ ನಿಗದಿಯಾದ ಸ್ಥಳದಲ್ಲಿ ತಗ್ಗು ತಗೆಯುವುದು, ಕಟ್ಟಡ ನಿರ್ಮಾಣ, ನೀರು ಪೂರೈಕೆ, ಉಸುಕು–ಸಿಮೆಂಟ್ ಕಲಿಸುವುದು, ಈ ಎಲ್ಲ ಕೆಲಸಗಳನ್ನು ಗ್ರಾಮಸ್ಥರ ಸಹಕಾರದಲ್ಲಿ ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ. ಕೆಲ ಕಡೆ ಸೇಫ್ಟಿ ಟ್ಯಾಂಕ್‌ ಸಹ ನಿರ್ಮಿಸಿ ಗ್ರಾಮಸ್ಥರ ಮೆಚ್ಚುಗೆ ಪಡೆದಿದ್ದಾರೆ’ ಎಂದು ಗ್ರಾಮದ ಹಿರಿಯ ಸಂಗಮೇಶ ಮೆಣಸಗಿ ಹೇಳಿದರು.

‘ಜಕ್ಕಲಿ ಗ್ರಾಮವನ್ನು ಬಯಲು ಶೌಚ ಮುಕ್ತವನ್ನಾಗಿಸಲು ಶ್ರಮಿಸುತ್ತಿರುವ ಶಿಬಿರಾರ್ಥಿಗಳಿಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ’ ಎಂದು ಅಂದಾನಪ್ಪ ದೊಡ್ಡಮೇಟಿ ತಿಳಿಸಿದರು. ಬಯಲು ಶೌಚ ಸಮಾಜಕ್ಕೆ ಅಂಟಿದ ಶಾಪ. ಶೌಚಾಲಯ ನಿರ್ಮಾಣಕ್ಕೆಂದೇ ಈ ಶಿಬಿರವನ್ನು ಮೀಸಲಾಗಿಟ್ಟಿರುವುದು ಇತರರಿಗೆ ಮಾದರಿಯಾಗಿದೆ’ ಎಂದು. ಎನ್‌.ಎಸ್‌.ಎಸ್ ಕಾರ್ಯಾಧಿಕಾರಿ ಈರಣ್ಣ ಲಗಳೂರ ಹೇಳಿದರು.

ಚಂದ್ರು ಎಂ. ರಾಥೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT