ಮಹಾತ್ಮಗಾಂಧಿ ಮಾನವೀಯತೆಯ ಮಹಾನ್ ಪ್ರವಾದಿ: ಬೆಂಜಾಮಿನ್‌ ನೆತನ್ಯಾಹು

7

ಮಹಾತ್ಮಗಾಂಧಿ ಮಾನವೀಯತೆಯ ಮಹಾನ್ ಪ್ರವಾದಿ: ಬೆಂಜಾಮಿನ್‌ ನೆತನ್ಯಾಹು

Published:
Updated:
ಮಹಾತ್ಮಗಾಂಧಿ ಮಾನವೀಯತೆಯ ಮಹಾನ್ ಪ್ರವಾದಿ: ಬೆಂಜಾಮಿನ್‌ ನೆತನ್ಯಾಹು

ಅಹಮದಾಬಾದ್: ಇಸ್ರೇಲ್ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಮಾನವೀಯತೆಯ ಮಹಾನ್ ಪ್ರವಾದಿ ಎಂದು ಕರೆದಿದ್ದಾರೆ.

ಅಹಮದಾಬಾದ್‌ನಲ್ಲಿ ಬೆಳಿಗ್ಗೆ ರೋಡ್ ಶೋ ನಡೆಸಿದ ಬೆಂಜಾಮಿನ್ ದಂಪತಿ ಹಾಗೂ ಪ್ರಧಾನಿ ಮೋದಿ ಇಲ್ಲಿನ ಸಬರಮತಿ ಆಶ್ರಮಕ್ಕೆ ತೆರಳಿದ್ದರು.

ಬೆಂಜಾಮಿನ್ ಮತ್ತು ಸಾರಾ ಅವರು, ‘ಮಾನವೀಯತೆಯ ಮಹಾನ್ ಪ್ರವಾದಿಯಾದ ಗಾಂಧೀಜಿಯವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದು ಸ್ಫೂರ್ತಿದಾಯಕವಾಗಿತ್ತು’ ಎಂದು ಆಶ್ರಮದ ವಿಸಿಟರ್ಸ್ ಪುಸ್ತಕದಲ್ಲಿ ಬರೆದು ಸಹಿ ಮಾಡಿದ್ದಾರೆ.

ಆಶ್ರಮದಲ್ಲೇ 20 ನಿಮಿಷಗಳ ಕಾಲ ಸಮಯ ಕಳೆದ ಬೆಂಜಾಮಿನ್‌ ನೆತನ್ಯಾಹು ದಂಪತಿ ನಂತರ ಗಾಂಧೀಜಿಯವರ ಮನೆಯಾದ ಹೃದಯ ಕುಂಜುಗೆ ಹೋಗಿದ್ದರು. ಇಲ್ಲಿಯೇ ಚರಕದ ಮೂಲಕ ನೂಲು ತೆಗೆದಿದ್ದಾರೆ ಹಾಗೂ ಗುಜರಾತಿನ ಪ್ರಮುಖ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಗಾಳಿಪಟ ಹಾರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry