ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

7

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

Published:
Updated:
ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

ಕಾರವಾರ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು ₨ 70 ಸಾವಿರ ಮೌಲ್ಯದ ಗೋವಾ ಮದ್ಯವನ್ನು ತಾಲ್ಲೂಕಿನ ಮುಡಗೇರಿ ಹೊಸಪಟ್ಟಣ ರಸ್ತೆಯ ಅರಣ್ಯ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

ಮಾರುತಿ 800 ಕಾರಿನಲ್ಲಿ ಮದ್ಯ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಸಿಕ್ಕಿದ್ದ ಅಧಿಕಾರಿಗಳು, ಆರೋಪಿಯ ಬಂಧನಕ್ಕೆ ಕಾಯುತ್ತಿದ್ದರು. ಆದರೆ, ಆರೋಪಿಯು ಇವರನ್ನು ಕಂಡ ಕೂಡಲೇ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ. ಒಟ್ಟು 14 ನೈಲಾನ್ ಚೀಲಗಳಲ್ಲಿ 176 ಲೀಟರ್ ಗೋವಾ ಮದ್ಯ ಹಾಗೂ 162 ಲೀಟರ್ ಗೋವಾ ಫೆನ್ನಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಅಬಕಾರಿ ಇಲಾಖೆಯಲ್ಲಿ ದೂರು ದಾಖಲಾಗಿದೆ. ಅಬಕಾರಿ ನಿರೀಕ್ಷಕ ಮಮಜುನಾಥ ಅರೆಗುಳಿ, ರಕ್ಷಕರಾದ ಶಿವಾನಂದ ಕೊರಡ್ಡಿ, ಎನ್.ಎನ್.ಖಾನ್ ಹಾಗೂ ಸಿಬ್ಬಂದಿ ವಿನೋದ ನಾಯ್ಕ, ಪರೇಶ ದೇಸಾಯಿ, ಅರುಣ ಅಂಕೋಲೆಕರ, ದಿನೇಶ ರಾಣೆ ಹಾಗೂ ರವಿಚಂದ್ರ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry