ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದರ್‌ಬೋರ್ಡ್‌ನಲ್ಲಿದೆ ಚಿನ್ನ

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

ಕಂಪ್ಯೂಟರ್‌ ಬಿಡಿ ಭಾಗಗಳನ್ನು ತಯಾರಿಸುವ ಡೆಲ್‌ ಕಂಪನಿ ಈಗ ಚಿನ್ನದ ಆಭರಣವನ್ನು ಮಾರಾಟ ಮಾಡಲು ಸಜ್ಜಾಗಿದೆ. ಈ ಆಭರಣಗಳು ಭೂಗರ್ಭದಿಂದ ಹೊರತೆಗೆದ ಚಿನ್ನದ ಗಟ್ಟಿಯಿಂದ ತಯಾರಿಸಿದ್ದಲ್ಲ. ಉಪಯೋಗಕ್ಕೆ ಬಾರದ ಹಳೆಯ ಕಂಪ್ಯೂಟರ್‌, ಮೊಬೈಲ್‌ಗಳ ಮದರ್‌ಬೋರ್ಡ್‌ನಿಂದ ಹೊರ ತೆಗೆದ ಚಿನ್ನದಿಂದ ತಯಾರಿಸಿದ್ದು.

ಅಮೆರಿಕದ ಲಾಸ್‌ ವೆಗಾಸ್‌ನಲ್ಲಿ ನಡೆದ ಸಿಇಎಸ್‌ ಶೋ 2018 (ಕನ್ಸ್ಯೂಮರ್‌ ಎಲೆಕ್ಟ್ರಾನಿಕ್ಸ್ ಷೋ) ಮೇಳದಲ್ಲಿ ಡೆಲ್‌ ಕಂಪನಿ, ಹಳೆಯ ಮದರ್‌ಬೋರ್ಡ್‌ಗಳಲ್ಲಿ ಗಣಿಗಾರಿಕೆ ನಡೆಸಿ ಹೊರ ತೆಗೆದ ಚಿನ್ನದಿಂದ ತಯಾರಿಸಿದ್ದ ಆಭರಣವನ್ನು ಪ್ರದರ್ಶಿಸಿದೆ.

ಈ ಆಭರಣಗಳು 14–18 ಕ್ಯಾರೆಟ್‌ ಗುಣಮಟ್ಟದ ಚಿನ್ನವಾಗಿದ್ದು, ಉಂಗುರ, ಕಿವಿ ಓಲೆ, ಕೋಟ್‌ಗಳಿಗೆ ಧರಿಸುವ ಕಫ್‌ಲಿಂಗ್ಸ್‌ಗಳ ರೂಪ ಪಡೆದುಕೊಂಡು ಬಿಕರಿಯಾಗಲು ಸಿದ್ಧಗೊಂಡಿವೆ.

ಹಾಲಿವುಡ್‌ ನಟಿ ಹಾಗೂ ಪರಿಸರವಾದಿ ನಿಕ್ಕಿ ರೆಡ್‌ ಅವರ ನೇತೃತ್ವದ ಬಯೂ ವಿತ್‌ ಲವ್‌(Bayou with Love) ಎಂಬ ಸಂಸ್ಥೆಯ ಮೂಲಕ ಈ ಆಭರಣಗಳನ್ನು ಆನ್‌ಲೈನ್‌ ಮೂಲಕ ಮಾರಟ ಮಾಡುತ್ತಿದೆ. ಇ–ವೇಸ್ಟ್‌ ಪುನರ್‌ಬಳಕೆಯಲ್ಲಿ ಡೆಲ್‌ ಕಂಪನಿ ಹೊಸ ಭಾಷ್ಯ ಬರೆದಿರುವುದು ಇತರ ಕಂಪನಿಗಳಿಗೆ ಕುತೂಹಲ ಮೂಡಿಸಿದೆ. ಮದರ್‌ಬೋರ್ಡ್‌ ಅನ್ನು ಸಂಸ್ಕರಿಸಿ ತಯಾರಿಸಲ್ಪಟ್ಟ ಚಿನ್ನದ ಆಭರಣಗಳು, ಸಾಂಪ್ರದಾಯಿಕ ಗಣಿಗಾರಿಕೆಯಿಂದ ಹೊರತೆಗೆದ ಚಿನ್ನಕ್ಕಿಂತ ಶೇ 99 ರಷ್ಟು ಪರಿಸರ ಸ್ನೇಹಿ ಪ್ರಕ್ರಿಯೆಯಾಗಿರುವುದು ಗಮನಾರ್ಹ.

ಅಮೆರಿಕ ದೇಶವೊಂದರಲ್ಲೇ ಪ್ರತಿವರ್ಷ 60 ಸಾವಿರ ಯುಎಸ್‌ ಮಿಲಿಯನ್‌ ಡಾಲರ್‌ನಷ್ಟು ಮೌಲ್ಯದ ಚಿನ್ನ, ಬೆಳ್ಳಿ ಲೇಪಿತವಾದ ಸಾವಿರಾರು ಮದರ್‌ಬೋರ್ಡ್‌ಗಳು ಕಸ ಸೇರುತ್ತಿವೆ. ಸೂಕ್ತ ರೀತಿಯಲ್ಲಿ ಮದರ್‌ ಬೋರ್ಡ್‌ಗಳನ್ನು ಸಂಸ್ಕರಿಸಿ, ಆಭರಣ ತಯಾರಿಕೆಯಿಂದ ಕಂಪನಿಗೆ ಹೊಸ ಲಾಭದ ಮೂಲ ದೊರೆಯುತ್ತದೆ ಎಂದು ಈ ಕಂಪನಿ ಸಾಬೀತುಪಡಿಸಿದೆ.

ಪುನರ್‌ಬಳಕೆಯ ಚಿನ್ನವನ್ನು ಹೊಸ ಮದರ್‌ಬೋರ್ಡ್‌ಗಳಲ್ಲಿ ಲೇಪಿಸಲು ಕಂಪನಿ ಸಿದ್ಧತೆ ನಡೆಸಿಕೊಂಡಿದ್ದು, ಮಾರ್ಚ್‌ನಲ್ಲಿ ಬಿಡುಗಡೆಗೊಳ್ಳಲಿರುವ ಲ್ಯಾಟಿಡ್ಯೂಡ್‌ 5285 (Latitude 5285) ಆವೃತ್ತಿಯ ಲ್ಯಾಪ್‌ಟಾಪ್‌ನ ಮದರ್‌ಬೋರ್ಡ್‌ನಲ್ಲಿ ಇದು ಸಾಧ್ಯವಾಗಲಿದೆ.

2020ರವೊಳಗೆ ಡೆಲ್‌ ರಿಕನೆಕ್ಟ್‌ ಯೋಜನೆಯಲ್ಲಿ(Dell Reconnect program) 100 ಮಿಲಿಯನ್‌ ಪೌಂಡ್‌ ಮೌಲ್ಯದ ಪುನರ್‌ಬಳಕೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT