35 ಸಾವಿರ ಗಡಿ ದಾಟಿದ ಮುಂಬೈ ಷೇರುಪೇಟೆ ಸೂಚ್ಯಂಕ

7

35 ಸಾವಿರ ಗಡಿ ದಾಟಿದ ಮುಂಬೈ ಷೇರುಪೇಟೆ ಸೂಚ್ಯಂಕ

Published:
Updated:
35 ಸಾವಿರ ಗಡಿ ದಾಟಿದ ಮುಂಬೈ ಷೇರುಪೇಟೆ ಸೂಚ್ಯಂಕ

ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಹೊಸ ದಾಖಲೆ ಬರೆದಿದೆ.

ದಿನದ ವಹಿವಾಟಿನ ಅಂತ್ಯದ ವೇಳೆಗೆ 310.77 ಅಂಶ ಏರಿಕೆ ದಾಖಲಿಸಿದ ಸೆನ್ಸೆಕ್ಸ್, 35,081.82ಕ್ಕೆ ತಲುಪಿದೆ. ಇದರೊಂದಿಗೆ, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 35 ಸಾವಿರ ಗಡಿ ದಾಟಿದಂತಾಗಿದೆ. ಇನ್ಫೊಸಿಸ್ ಸೇರಿದಂತೆ ಐಟಿ ಕ್ಷೇತ್ರದ ಷೇರುಗಳು ಮತ್ತು ಪ್ರಮುಖ ಖಾಸಗಿ ಬ್ಯಾಂಕುಗಳ ಷೇರುಗಳ ವಹಿವಾಟು ಉತ್ತಮವಾಗಿತ್ತು.

ಮತ್ತೊಂದೆಡೆ, ನಿಫ್ಟಿ ಸಹ ಉತ್ತಮ ವಹಿವಾಟು ದಾಖಲಿಸಿದೆ. ದಿನದ ವಹಿವಾಟಿನ ಕೊನೆಗೆ 88.10 ಅಂಶ ಏರಿಕೆ ದಾಖಲಿಸಿ 10,788.55ರಷ್ಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry