ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

Last Updated 17 ಜನವರಿ 2018, 13:37 IST
ಅಕ್ಷರ ಗಾತ್ರ

ಮುಂಬೈ: ₹ 10 ಮುಖಬೆಲೆಯ 14 ಬಗೆಯ ನಾಣ್ಯಗಳು ಚಲಾವಣೆಗೆ ಅರ್ಹವಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮತ್ತೊಮ್ಮ ಸ್ಪಷ್ಟ‍ಪಡಿಸಿದೆ.

ಕೆಲ ವರ್ತಕರು ₹ 10ರ ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವರದಿಯಾಗಿರುವುದರಿಂದ ಆರ್‌ಬಿಐ ಈ ಪ್ರಕಟಣೆ ಹೊರಡಿಸಿದೆ.

₹ 10 ಮುಖಬೆಲೆಯ ನಾಣ್ಯದ ಬಗ್ಗೆ ಯಾರೊಬ್ಬರೂ ಹಾಗೆ ಅನುಮಾನ ಪಡಬೇಕಾಗಿಲ್ಲ. ₹ 10 ಮುಖಬೆಲೆಯ ಎಲ್ಲ ನಾಣ್ಯಗಳು ಬಳಕೆಗೆ ಯೋಗ್ಯವಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಟಂಕಸಾಲೆಗಳಲ್ಲಿಯೇ ಈ ನಾಣ್ಯಗಳನ್ನು ಟಂಕಿಸಲಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿನಿಧಿಸುವ, ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿರುವ ಈ ನಾಣ್ಯಗಳನ್ನು ಆಯಾ ಕಾಲಕ್ಕೆ ಹೊರತರಲಾಗಿದೆ ಎಂದು ಆರ್‌ಬಿಐ ಹೇಳಿದೆ.

ಅಲ್ಲದೆ, ಈ ನಾಣ್ಯಗಳನ್ನು ಸ್ವೀಕರಿಸಲು ಮತ್ತು ವಿನಿಮಯ ಮಾಡಿಕೊಡಲು ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸಿದೆ. ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ ಎಂದು ಈ ಹಿಂದೆಯೂ ಆರ್‌ಬಿಐ ಸ್ಪಷ್ಟಪಡಿಸಿತ್ತು. ಆದರೂ ಆ ಕುರಿತ ಗೊಂದಲ ಮುಂದುವರಿದಿದೆ. ಹೀಗಾಗಿ ಆರ್‌ಬಿಐ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT