ಚುನಾವಣಾ ಆಯುಕ್ತರ ಸಂಬಳ ದುಪ್ಪಟ್ಟು?

7

ಚುನಾವಣಾ ಆಯುಕ್ತರ ಸಂಬಳ ದುಪ್ಪಟ್ಟು?

Published:
Updated:

ನವದೆಹಲಿ: ಕೇಂದ್ರ ಚುನಾವಣಾ ಆಯುಕ್ತರ ಸಂಬಳ ಎರಡು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಆಯುಕ್ತರ ಪರಿಷ್ಕೃತ ಸಂಬಳ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವೇತನಕ್ಕೆ ಸರಿ ಸಮವಾಗಿ ಏರಿಕೆಯಾಗಲಿದೆ.

ಚುನಾವಣಾ ಆಯೋಗ ಕಾಯ್ದೆ 1991ರ ಅನ್ವಯ ಚುನಾವಣಾ ಆಯುಕ್ತರ ಸಂಬಳವು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವೇತನಕ್ಕೆ ಸಮನಾಗಿರಬೇಕು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವೇತನ ಶೀಘ್ರದಲ್ಲಿಯೇ ಒಂದು ಲಕ್ಷದಿಂದ ₹2.80 ಲಕ್ಷದವರೆಗೆ ಹೆಚ್ಚಲಿದ್ದು, ಅದರೊಂದಿಗೆ ಚುನಾವಣಾ ಆಯುಕ್ತರ ವೇತನವೂ ಸಹ ಸಹಜವಾಗಿ ₹2.50 ಲಕ್ಷದವರೆಗೆ ಏರಿಕೆಯಾಗಲಿದೆ ಎಂದು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನ ಹೆಚ್ಚಳ ಮಸೂದೆಗೆ ಸಂಸತ್‌ ಚಳಿಗಾಲ ಅಧಿವೇಶನದಲ್ಲಿ ಲೋಕಸಭೆ ಅಂಗೀಕಾರ ನೀಡಿದೆ.

ಇದೇ 29ರಿಂದ ಆರಂಭವಾಗಲಿರುವ ಬಜೆಟ್‌ ಅಧಿವೇಶನದಲ್ಲಿ ರಾಜ್ಯಸಭೆಯಲ್ಲೂ ಈ ಮಸೂದೆಗೆ ಅಂಗೀಕಾರ ದೊರೆಯುವ ನಿರೀಕ್ಷೆ ಇದೆ. ರಾಷ್ಟ್ರಪತಿ ಅಂಕಿತ ಬಿದ್ದ ನಂತರ ಮಸೂದೆ ಕಾನೂನಾಗಿ ಮಾರ್ಪಡಲಿದ್ದು, ಬಳಿಕ ವೇತನ ಪರಿಷ್ಕರಣೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry