ಬ್ರಿಟನ್‌: ಒಬ್ಬಂಟಿತನ ನಿವಾರಣೆಗೆ ಸಚಿವರ ನೇಮಕ

7

ಬ್ರಿಟನ್‌: ಒಬ್ಬಂಟಿತನ ನಿವಾರಣೆಗೆ ಸಚಿವರ ನೇಮಕ

Published:
Updated:

ಲಂಡನ್: ಒಬ್ಬಂಟಿತನ ಸಮಸ್ಯೆ ನಿವಾರಣೆಗೆ ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರು ಪ್ರತ್ಯೇಕ ಸಚಿವರನ್ನು ನೇಮಿಸಿದ್ದಾರೆ.

ಬಲಪಂಥೀಯ ಮಾನಸಿಕ ಅಸ್ವಸ್ಥನಿಂದ 2016ರ ಜೂನ್‌ನಲ್ಲಿ ಹತ್ಯೆಯಾಗಿದ್ದ ಲೇಬರ್ ಪಕ್ಷದ ಸಂಸದೆ ಜೊ ಕಾಕ್ಸ್ ಅವರ ಸ್ಮರಣಾರ್ಥ, ದೇಶದಲ್ಲಿ ಮೊದಲ ಬಾರಿ ಇಂತಹ ಹುದ್ದೆಯನ್ನು ಸೃಷ್ಟಿಸಲಾಗಿದೆ.

ಪ್ರಸ್ತುತ ಕ್ರೀಡೆ ಮತ್ತು ನಾಗರಿಕ ಸಚಿವೆ ಆಗಿರುವ ಟ್ರೇಸಿ ಕ್ರೌಚ್ ಅವರಿಗೆ ಈ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

‘ದೇಶದಾದ್ಯಂತ ಒಬ್ಬಂಟಿತನ ಅನುಭವಿಸುತ್ತಿರುವವರ ಪ್ರಮಾಣ ಹೆಚ್ಚಿದೆ ಎನ್ನುವುದನ್ನು ಗುರುತಿಸಿದ್ದ ಕಾಕ್ಸ್‌, ಅಂತಹವರಿಗೆ ಸಾಧ್ಯವಾದಷ್ಟೂ ನೆರವು ನೀಡಲು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು’ ಎಂದು ಮೇ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry