ಎನ್‌ಪಿಎಸ್‌ ನಿಯಮ ಸಡಿಲಿಕೆ

5

ಎನ್‌ಪಿಎಸ್‌ ನಿಯಮ ಸಡಿಲಿಕೆ

Published:
Updated:

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಮನೆ ಖರೀದಿ, ಗಂಭೀರ ಸ್ವರೂಪದ ಕಾಯಿಲೆಗೆ ಚಿಕಿತ್ಸೆ, ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆ ಉದ್ದೇಶಗಳಿಗೆ ಚಂದಾದಾರರು ತಮ್ಮ ದೇಣಿಗೆಯ ಶೇ 25ರಷ್ಟು ಮೊತ್ತವನ್ನು ವಾಪಸ್‌ ಪಡೆಯಬಹುದು ಎಂದು ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಬುಧವಾರ ತಿಳಿಸಿದೆ.

ಮೂರು ವರ್ಷಗಳವರೆಗೆ ಯೋಜನೆಗೆ ಹಣ ಪಾವತಿಸಿದವರು ಇದರ ಪ್ರಯೋಜನ ಪಡೆಯಬಹುದು. ತಮ್ಮ ಒಟ್ಟು ಮೊತ್ತದ ಶೇ 25ರಷ್ಟನ್ನು ವಾಪಸ್‌ ಪಡೆಯಬಹುದಾಗಿದೆ. ಮೂರು ಬಾರಿ ಮಾತ್ರ ಹೀಗೆ ಹಣ ವಾಪಸ್‌ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry