ಜಿಂಬಾಬ್ವೆಗೆ ಶ್ರೀಲಂಕಾ ಎದುರು ಜಯ

7

ಜಿಂಬಾಬ್ವೆಗೆ ಶ್ರೀಲಂಕಾ ಎದುರು ಜಯ

Published:
Updated:
ಜಿಂಬಾಬ್ವೆಗೆ ಶ್ರೀಲಂಕಾ ಎದುರು ಜಯ

ಢಾಕಾ (ಎಎಫ್‌ಪಿ): ವೇಗದ ಬೌಲರ್‌ ತೆಂದೈ ಚತ್ರ (33ಕ್ಕೆ4) ಅವರ ಆಕ್ರಮಣಕಾರಿ ದಾಳಿಯ ನೆರವಿನಿಂದ ಜಿಂಬಾಬ್ವೆ ತಂಡ ತ್ರಿಕೋನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಗುರುವಾರ ಶ್ರೀಲಂಕಾ ತಂಡದ ಎದುರು 12 ರನ್‌ಗಳಿಂದ ಗೆದ್ದಿತು.

ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಬಾಂಗ್ಲಾದೇಶ ತಂಡದ ಎದುರು ಸೋತಿತ್ತು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 290ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಲಂಕಾ ತಂಡ 48.1 ಓವರ್‌ಗಳಲ್ಲಿ 278ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಹ್ಯಾಮಿಲ್ಟನ್‌ ಮಸ್ಕಂದಜ (73, 83ಎ, 10ಬೌಂ)  ಅರ್ಧಶತಕ ದಾಖಲಿಸಿ ಜಿಂಬಾಬ್ವೆ ತಂಡಕ್ಕೆ ಆಸರೆಯಾದರು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 290 (ಹ್ಯಾಮಿಲ್ಟನ್ ಮಸ್ಕಂದಜ 73, ಬ್ರೆಂಡನ್‌ ಟೇಲರ್‌ 38; ಅಸೇಲಾ ಗುಣರತ್ನೆ 37ಕ್ಕೆ3). ಶ್ರೀಲಂಕಾ; 48.1 ಓವರ್‌ಗಳಲ್ಲಿ 278 (ಕುಶಾಲ್ ಪೆರೇರಾ 80, ಏಂಜೆಲೊ ಮ್ಯಾಥ್ಯೂಸ್‌ 42, ತಿಸಾರ ಪೆರೇರಾ 64; ತೆಂದೈ ಚತ್ರ 33ಕ್ಕೆ4). ಫಲಿತಾಂಶ: ಜಿಂಬಾಬ್ವೆ ತಂಡಕ್ಕೆ 12 ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry