ಸಮಾಜ ಒಡೆಯುವ ಹುನ್ನಾರ: ಸೋಮಣ್ಣ

7

ಸಮಾಜ ಒಡೆಯುವ ಹುನ್ನಾರ: ಸೋಮಣ್ಣ

Published:
Updated:

ಮೈಸೂರು: ‘ವೀರಶೈವ ಮತ್ತು ಲಿಂಗಾಯತ ಎಂಬ ಹೆಸರಿನಲ್ಲಿ ಬಹುಸಂಖ್ಯಾತವಾಗಿರುವ ಸಮಾಜವೊಂದನ್ನು ಅಲ್ಪಸಂಖ್ಯಾತರನ್ನಾಗಿ ಮಾಡಿ ತುಳಿಯುವ ಹುನ್ನಾರ ನಡೆಯುತ್ತಿದೆ. ಈ ಕುರಿತು ಎಚ್ಚರದಿಂದ ಇರದಿದ್ದರೆ ನಾವು ಶಾಪಗ್ರಸ್ತರಾಗಬೇಕಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ತಿಳಿಸಿದರು.

ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಮಾತನಾಡಿದರು.

ವೀರಶೈವ ಮತ್ತು ಲಿಂಗಾಯತ ಇಬ್ಬರನ್ನೂ ಒಂದೇ ವೇದಿಕೆಗೆ ಕರೆತಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಜಾತ್ರೆ ಮಾಡು

ತ್ತಿದ್ದಾರೆ. ಇದು ಪವಿತ್ರ ಕೆಲಸ. ಇಂತಹ ಕಾರ್ಯಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry