ಹುಬ್ಬಳ್ಳಿ ನೈಟ್ಸ್‌ಗೆ ಗೆಲುವು

7

ಹುಬ್ಬಳ್ಳಿ ನೈಟ್ಸ್‌ಗೆ ಗೆಲುವು

Published:
Updated:
ಹುಬ್ಬಳ್ಳಿ ನೈಟ್ಸ್‌ಗೆ ಗೆಲುವು

ಹುಬ್ಬಳ್ಳಿ: ಕೊನೆಯ ಓವರ್‌ನಲ್ಲಿ ಗೆಲುವಿಗೆ ಅಗತ್ಯವಿದ್ದ 9 ರನ್‌ಗಳನ್ನು ಗಳಿಸಿದ ಹುಬ್ಬಳ್ಳಿ ನೈಟ್ಸ್‌ ತಂಡ ಹುಬ್ಬಳ್ಳಿ ಪ್ರೀಮಿಯರ್ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ರೋಚಕ ಗೆಲುವು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ್ದ ಮುಂಡಗೋಡ ಮಾನ್‌ಸ್ಟರ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 179 ರನ್‌ ಗಳಿಸಿತ್ತು. ಈ ಗುರಿಯನ್ನು ನೈಟ್ಸ್ ಪಡೆ ಒಂದು ಎಸೆತ ಬಾಕಿ ಇರುವಂತೆ ಮುಟ್ಟಿತು. ರಣಜಿ ಟೂರ್ನಿಯಲ್ಲಿ ಆಡಿದ ಅನುಭವಿ ಬ್ಯಾಟ್ಸ್‌ಮನ್‌ ಅಬ್ರಾರ್ ಖಾಜಿ (ಔಟಾಗದೆ 76, 51 ಎಸೆತ, 4 ಬೌಂಡರಿ, 4 ಸಿಕ್ಸರ್‌) ಜಯಕ್ಕೆ ಪ್ರಮುಖ ಕಾರಣರಾದರು.

ದಿನದ ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡದ ಎದುರು ಶಿರಸಿಯ ನಿಲೇಕಣಿ ಚಾಲೆಂಜರ್ಸ್‌ ಆರು ವಿಕೆಟ್‌ಗಳ ಜಯ ಸಾಧಿಸಿತು. ಟೈಗರ್ಸ್‌ ನೀಡಿದ್ದ 115 ರನ್ ಗುರಿಯನ್ನು ಚಾಲೆಂಜರ್ಸ್‌ 15.5 ಓವರ್‌ಗಳಲ್ಲಿ ತಲುಪಿ ಸೆಮಿಫೈನಲ್‌ ಪ್ರವೇಶಿಸುವ ಸ್ಪರ್ಧೆಯಲ್ಲಿ ಉಳಿಯಿತು. ಜ. 19ರಂದು ಕೊನೆಯ ಲೀಗ್‌ ಪಂದ್ಯಗಳು ನಡೆಯಲಿವೆ. 21ರಂದು ಫೈನಲ್‌ ಜರುಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry