ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಮಾಲಯನ್ ಸ್ಲೀಟ್’– ಏನೇನಿದೆ?

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

ರಾಯಲ್‌ ಎನ್‌ಫೀಲ್ಡ್, ಸ್ಟೈಲಿಶ್ ಆದ ತನ್ನ ‘ಹಿಮಾಲಯನ್ ಸ್ಲೀಟ್’ ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದು, ಬೂದು ಬಣ್ಣದ ಶೇಡ್‌ನೊಂದಿಗೆ ಹೊಸ ಪ್ಯಾಟರ್ನ್‌ನಲ್ಲಿ ಎನ್‌ಫೀಲ್ಡ್ ಪ್ರಿಯರ ಮನಗೆದ್ದಿದೆ.

ಪರ್ವತಗಳಿಂದ ಪ್ರೇರೇಪಿತವಾಗಿ ಸ್ಲೀಟ್‌ಗೆ ಈ ಬಣ್ಣವನ್ನು ನೀಡಲಾಗಿದೆ. ಹಿಮಾಲಯ ಪ್ರದೇಶ, ಅದರ ಗಿರಿ ಕಂದರಗಳು, ಮೋಹಕ ಎತ್ತರ, ಇವೆಲ್ಲದರ ಗಾಂಭೀರ್ಯವೇ ಈ ಹಿಮಾಲಯನ್ ಸ್ಲೀಟ್‌ಗೂ ಸ್ಫೂರ್ತಿ ಎಂದು ಹೇಳಿಕೊಂಡಿದೆ ಕಂಪನಿ.

ಮೊದಲ 500 ಗ್ರಾಹಕರಿಗೆ ಬೈಕ್‌ನೊಂದಿಗೆ ಎಕ್ಸ್‌ಪ್ಲೋರರ್ ಕಿಟ್‌ಗಳನ್ನು ನೀಡಲಾಗುವುದು. ಅಲ್ಯೂಮಿನಿಯಂ ಪ್ಯಾನಿಯರ್‌ಗಳು, ಕ್ರಾಸ್‌ ಬ್ರೇಸ್‌ನೊಂದಿಗೆ ಆಫ್‌ ರೋಡ್ ಸ್ಟೈಲ್ ಅಲ್ಯೂಮಿನಿಯಂ ಹ್ಯಾಂಡಲ್‌ ಬಾರ್‌ಗಳು, ಹ್ಯಾಂಡಲ್‌ಬಾರ್‌ ಎಂಡ್‌ ವೇಟ್‌, ಪೌಡರ್ ಕೋಟೆಡ್ ಫಿನಿಶ್ ಎಂಜಿನ್ ಗಾರ್ಡ್ ಹೊಂದಿರುವುದಾಗಿ ರಾಯಲ್‌ ಎನ್‌ಫೀಲ್ಡ್‌ ಅಧ್ಯಕ್ಷ ರುದ್ರತೇಜ್ ತಿಳಿಸಿದ್ದಾರೆ.

ಲಾಂಗ್‌ ಡ್ರೈವ್‌ ಉದ್ದೇಶವಾಗಿಟ್ಟು ರೂಪಿತಗೊಂಡ ಈ ಬೈಕ್‌ನ ಆನ್‌ ರೋಡ್ ಚೆನ್ನೈ ಬೆಲೆ ₹ 2.12 ಲಕ್ಷ. ಜನವರಿ 12ರಿಂದ ಆರಂಭಗೊಂಡಿದ್ದು 30ರವರೆಗೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬಹುದು. 2 ವರ್ಷದ ವ್ಯಾರಂಟಿಯನ್ನೂ ಕಂಪನಿ ನೀಡಲಿದೆ.

*


ಹೋಂಡಾದಿಂದ ಒಂದಲ್ಲ, ಮೂರು ವಿಶೇಷ ಆವೃತ್ತಿ
ಹೋಂಡಾ ಕಾರ್ ಇಂಡಿಯಾ, ತನ್ನ ಮೂರು ಮಾದರಿ– ಸಿಟಿ, ಅಮೇಜ್ ಹಾಗೂ ಡಬ್ಲುಆರ್‌ವಿಯ ವಿಶೇಷ ಆವೃತ್ತಿಗಳನ್ನು ಹೊರತಂದಿದೆ. ಹೋಂಡಾ ಸಿಟಿ 20th ಆ್ಯನಿವರ್ಸರಿ ಎಡಿಷನ್, ಹೋಂಡಾ ಅಮೇಜ್ ಪ್ರೈಡ್ ಎಡಿಷನ್, ಹೋಂಡಾ wr-v ಎಡ್ಜ್‌ ಎಡಿಷನ್ ಎಂಬ ಹೆಸರುಗಳಲ್ಲಿ ವಿಶೇಷ ಆವೃತ್ತಿಗಳು ಕಾಣಿಸಿಕೊಂಡಿವೆ. ಸಿಟಿ ಆವೃತ್ತಿ ₹ 13.74 ಲಕ್ಷ –ಪೆಟ್ರೋಲ್‌, ₹ 13.82 ಲಕ್ಷ –ಡೀಸೆಲ್, ಅಮೇಜ್‌ಗೆ ₹ 6.29 ಲಕ್ಷ –ಪೆಟ್ರೋಲ್,

₹ 7.83 ಲಕ್ಷ –ಡೀಸೆಲ್‌. wr-v ಎಡ್ಜ್‌ ₹ 8.01 ಲಕ್ಷ–ಪೆಟ್ರೋಲ್, ₹ 9.04 ಲಕ್ಷ –ಡೀಸೆಲ್ ಬೆಲೆ ನಿಗದಿಗೊಳಿಸಲಾಗಿದೆ.

ಹೋಂಡಾ ಸಿಟಿಯ 20 ವರ್ಷದ ಯಶಸ್ಸಿನ ಗುರುತಾಗಿ ಸಿಟಿ 20th ಆ್ಯನಿವರ್ಸರಿ ಆವೃತ್ತಿ ಹೊರತಂದಿದ್ದು, ಬಾಹ್ಯ ಬದಲಾವಣೆಗಳನ್ನು ಹೊಂದಿರಲಿದೆ. ಲಾಂಛನ, ಫ್ರಂಟ್ ಬಂಪ್, ಸೆಂಟರ್–ಸೈಡ್ ಗಾರ್ನಿಶ್, ಡೋರ್ ಲೋವರ್ ಗಾರ್ನಿಶ್, ಟ್ರಂಕ್ ಎಂಡ್ ಮೋಲ್ಡಿಂಗ್ ಹೊಂದಿರಲಿದೆ.

ಹೋಂಡಾ ಅಮೇಜ್ ಪ್ರೈಡ್ ಆವೃತ್ತಿಯಲ್ಲಿ ಹಲವು ಆಯ್ಕೆಗಳನ್ನು ನೀಡಲಾಗಿದೆ. ಡೋರ್ ಎಡ್ಜ್ ಗಾರ್ನಿಶ್, ಕ್ಯಾಬಿನ್‌ನಲ್ಲಿ 17.7 ಸಿಎಂ ಡಿಜಿಪ್ಯಾಡ್ ಆಡಿಯೊ ವಿಡಿಯೊ, ನೇವಿಗೇಷನ್ ಇನ್ಫೊಟೇನ್ಮೆಂಟ್‌ ಸಿಸ್ಟಂ ಇದೆ. ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಸುರಕ್ಷತೆ ಭಾಗವಾಗಿ ನೀಡಲಾಗಿದೆ. ಕೊನೆಯದಾಗಿ, ಹೋಂಡಾ WR-V ಎಡ್ಜ್‌ ಆವೃತ್ತಿ ಸ್ಟೈಲಿಶ್ ಎಕ್ಸ್‌ಟೀರಿಯರ್‌ ಹೊಂದಿದೆ. 16 ಇಂಚಿನ ಗನ್‌ಮೆಟಲ್ ಫಿನಿಶ್ ಮಲ್ಟಿ ಸ್ಪೋಕ್ ಅಲಾಯ್ ಚಕ್ರಗಳು, ರಿಯರ್ ಕ್ಯಾಮೆರಾ ಐಆರ್‌ವಿಎಂ ಡಿಸ್ಪ್ಲೇ, ರಿಯರ್ ಪಾರ್ಕಿಂಗ್ ಸೆನ್ಸರ್ ನೀಡಲಾಗಿದೆ.

*


ಪರಿಷ್ಕೃತವಾಗಿದೆ ಯಮಾಹ FZ-S
ಯಮಾಹದ ಎಫ್‌ಝಡ್‌ ಸರಣಿ 10 ವರ್ಷ ಪೂರೈಸಿದ ಸ್ಮರಣಾರ್ಥವಾಗಿ ಇಂಡಿಯಾ ಯಮಾಹ ಮೋಟಾರು ಕಂಪನಿ, ಪರಿಷ್ಕೃತಗೊಂಡಿರುವ FZ-S FI ಮೋಟಾರ್‌ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ‘ಟ್ರಿಪಲ್ ಮಸ್ಕುಲರ್’ ಪರಿಕಲ್ಪನೆಯಲ್ಲಿ ಈ ಬೈಕನ್ನು ಹೊರತರಲಾಗಿದ್ದು, ಸಂಪೂರ್ಣ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ. ಆರ್ಮಡ್‌ ಬ್ಲೂ ಶೇಡ್‌ ಬಣ್ಣ, ಬಾಡಿ ಗ್ರಾಫಿಕ್ಸ್‌ ಅಷ್ಟೇ ಅಲ್ಲದೇ, 220 ಎಂಎಂ ಹೈಡ್ರಾಲಿಕ್ ಸಿಂಗಲ್ ರಿಯರ್ ಡಿಸ್ಕ್‌ ಬ್ರೇಕ್ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ.

ತಾಂತ್ರಿಕವಾಗಿ , 149 ಸಿಸಿ ಏರ್‌ಕೂಲ್ಡ್ ಫ್ಯುಯೆಲ್ ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಇದ್ದು, 13 ಬಿಎಚ್‌ಪಿ– 8000 ಆರ್‌ಪಿಎಂ ಹಾಗೂ 12.8 ಎನ್ಎಂ ಪೀಕ್‌ ಟಾರ್ಕ್– 6000 ಆರ್‌ಪಿಎಂ ಶಕ್ತಿ ಉತ್ಪಾದಿಸಲಿದೆ. 5 ಸ್ಪೀಡ್ ಟ್ರಾನ್ಸ್‌ಮಿಷನ್ ಇದೆ. ಹೆಚ್ಚಿನ ಇಂಧನ ಕ್ಷಮತೆಗೆ ಬ್ಲೂ ಕೋರ್ ತಂತ್ರಜ್ಞಾನ ಅಳವಡಿಸಿರುವುದು ಈ ಬೈಕ್‌ನ ವಿಶೇಷಗಳಲ್ಲಿ ಒಂದು. 282 ಎಂಎಂ ಫ್ರಂಟ್ ಡಿಸ್ಕ್‌ ಬ್ರೇಕ್ ಇದ್ದು, ಹೆಚ್ಚು ಕಾಸ್ಮೆಟಿಕ್ ಬದಲಾವಣೆಯೆಡೆಗೆ ಲಕ್ಷ್ಯ ನೀಡಿಲ್ಲ. ಸಸ್ಪೆನ್ಷನ್, ಮಿಡ್‌ಶಿಪ್ ಮಫ್ಲರ್, ಸ್ಕಿಡ್ ಫ್ರೀ ಸ್ಪ್ಲಿಟ್ ಸೀಟ್, ಮಲ್ಟಿ ಫಂಕ್ಷನ್ ಇನ್ಸ್‌ಸ್ಟ್ರುಮೆಂಟ್ ಪ್ಯಾನೆಲ್ ಎಕೊ ಇಂಡಿಕೇಟರ್ ಇವೆಲ್ಲವೂ ಮತ್ತಿತರ ಆಯ್ಕೆಗಳು.

ಇದರ ಬೆಲೆ ₹ 86,042. (ಎಕ್ಸ್‌ ಶೋರೂಂ ದೆಹಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT