ಸಂತೃಪ್ತ್‌, ತುಷಾರ್ ಪ್ರಧಾನ ಸುತ್ತಿಗೆ

7
ಬ್ಯಾಡ್ಮಿಂಟನ್‌: ಪ್ರಧಾನ ಹಂತದ ಪಂದ್ಯಗಳು ಇಂದಿನಿಂದ

ಸಂತೃಪ್ತ್‌, ತುಷಾರ್ ಪ್ರಧಾನ ಸುತ್ತಿಗೆ

Published:
Updated:
ಸಂತೃಪ್ತ್‌, ತುಷಾರ್ ಪ್ರಧಾನ ಸುತ್ತಿಗೆ

ಕಲಬುರ್ಗಿ: ಎಚ್‌.ವಿ ಸಂತೃಪ್ತ್ ಮತ್ತು ತುಷಾರ್ ಸುವೀರ್ ಅವರು ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದಾರೆ.

15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಎಚ್.ವಿ.ಸಂತೃಪ್ತ್ 15–11, 15–6, 16–14ರಲ್ಲಿ ತಮಿಳುನಾಡಿನ ಎನ್.ಶ್ರೀಹರೀಶ್‌ ಅವರನ್ನು ಸೋಲಿಸಿದರು. ತುಷಾರ್‌ ಸುವೀರ್‌ 14–16, 15–7, 15–10ರಲ್ಲಿ ತಮಿಳುನಾಡಿನ ಅಶ್ವಿನ್ ಕಾರ್ತಿಕ್ ಅವರನ್ನು ಸೋಲಿಸಿದರು.

15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಆಶಿತಾ ಸಿಂಗ್ 15–12, 15–11ರಲ್ಲಿ ತಮಿಳುನಾಡಿನ ಯು.ರೇಷಿಕಾ ಎದುರು ಗೆದ್ದರು. ನೈಸಾ ಕಾರ್ಯಪ್ಪ 15–8, 15–9ರಲ್ಲಿ ತೆಲಂಗಾಣದ ಪಲ್ಲವಿ ಜೋಶಿ ಅವರನ್ನು ಮಣಿಸಿದರು.

15 ವರ್ಷಗೊಳಗಿನವರ ಬಾಲ ಕರ ಡಬಲ್ಸ್‌ನಲ್ಲಿ ಕರ್ನಾಟಕದ ಎಚ್.ವಿ.ಸಂತೃಪ್ತ್, ಎಸ್.ಸುಜಲ್ ಅವರು 15–11, 15–10ರಲ್ಲಿ ಮಧ್ಯಪ್ರವೇಶದ ಕುಶಾಗ್ರ ಪಾಂಡೆ, ವಿನಯ್‌ ಶರ್ಮಾ ಎದುರು ಗೆದ್ದರು.

ಎಸ್‌. ಖುಶ್ವಂತ್, ಚೈತನ್ಯ ಎಸ್.ರಾವ್ ಅವರು 15–11, 15–17, 5–8ರಲ್ಲಿ ತಮಿಳುನಾಡಿನ ಕೆ.ಜೆ.ಉಪೇಂದ್ರ, ಎಸ್‌.ಎಂ.ಶಿವಮಹಾರಾಜನ್ ಅವರನ್ನು ಮಣಿಸಿದರು. ಆದಿತ್ಯ ದಿವಾಕರ್, ಎಂ.ಗೌತಮ್ 15–7, 18–16ರಲ್ಲಿ ತೆಲಂಗಾಣದ ಜಿ.ಬಾಸಿರೆಡ್ಡಿ, ಆರ್.ತಳ್ಳುರಿ ಅವರನ್ನು ಪರಾಭವಗೊಳಿಸಿದರು.

15 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ಎ.ನೈಸಾ ಕಾರ್ಯಪ್ಪ, ಜಯಂತಿಕಾ ರಾಥೋರ್‌ ಅವರು 15–9, 15–9ರಲ್ಲಿ ವೈಷ್ಣವಿ ಖಾಡೇಕರ್ (ತೆಲಂಗಾಣ), ದೀಪಿಕಾ (ಆಂಧ್ರಪ್ರದೇಶ) ಎದುರು, ಅದೇ ರೀತಿ ವಿ.ಗ್ಲೋರಿಯಾ ಅಠವಾಳೆ, ಎಚ್.ಎ.ಅಕ್ಷತಾ 13–15, 15–4, 15–13ರಲ್ಲಿ ಕೆ.ಯುವರ್ಷಿ (ಪುದುಚೆರಿ), ಶ್ರೀನಿತ್ಯಾ ನರಹರಿಶೆಟ್ಟಿ (ಆಂಧ್ರಪ್ರದೇಶ) ಅವರ ವಿರುದ್ಧ ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry