‘ಕಣಕುಂಬಿಗೆ ಗೋವಾ ಸಚಿವರನ್ನು ಬಿಟ್ಟಿದ್ದೇ ತಪ್ಪು’

7

‘ಕಣಕುಂಬಿಗೆ ಗೋವಾ ಸಚಿವರನ್ನು ಬಿಟ್ಟಿದ್ದೇ ತಪ್ಪು’

Published:
Updated:
‘ಕಣಕುಂಬಿಗೆ ಗೋವಾ ಸಚಿವರನ್ನು ಬಿಟ್ಟಿದ್ದೇ ತಪ್ಪು’

ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಕಳಸಾ- ಬಂಡೂರಿ ನಾಲಾ ಯೋಜನೆ ಕಾಮಗಾರಿ ಸ್ಥಳ ಕಣಕುಂಬಿಗೆ ಭೇಟಿ ನೀಡಲು ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್‌ ಅವರಿಗೆ ಅವಕಾಶ ನೀಡುವ ಮೂಲಕ ರಾಜ್ಯ ಸರ್ಕಾರ ಗಂಭೀರ ಕರ್ತವ್ಯಲೋಪ ಎಸಗಿದೆ’ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.

ಕೊಪ್ಪಳ ಏತ ನೀರಾವರಿ ಯೋಜನೆಗಾಗಿ ಬಿಜೆಪಿ ಯುವ ಮೋರ್ಚಾ ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಬುಧವಾರ ಕಲಾಲಬಂಡಿ ಗ್ರಾಮದಲ್ಲಿ ಬಿಜೆಪಿ ಪಾದಯಾತ್ರೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆ ಸಚಿವ ಇಲ್ಲಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದಲ್ಲ. ಬದಲಾಗಿ ವಿವಾದಿತ ಸ್ಥಳಕ್ಕೆ ಬಂದರೂ ಅವರಿಗೆ ಪೊಲೀಸ್‌ ರಕ್ಷಣೆ ಕೊಡಲಾಯಿತು. ಸ್ಥಳದಲ್ಲೇ ಚಿತ್ರ ತೆಗೆಸಿಕೊಳ್ಳಲು ಮತ್ತು ಚಿತ್ರೀಕರಣಕ್ಕೆ ಅವಕಾಶ ನೀಡಲಾಯಿತು. ಆಗಿರುವ ಈ ತಪ್ಪು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರವು ಬಿಜೆಪಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry