ಮೂರನೇ ಸುತ್ತಿಗೆ ವೋಜ್ನಿಯಾಕಿ

7
ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ; ಸ್ವಿಟೋಲಿನಾಗೆ ಜಯ

ಮೂರನೇ ಸುತ್ತಿಗೆ ವೋಜ್ನಿಯಾಕಿ

Published:
Updated:
ಮೂರನೇ ಸುತ್ತಿಗೆ ವೋಜ್ನಿಯಾಕಿ

ಮೆಲ್ಬರ್ನ್ (ಎಎಫ್‌ಪಿ): ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ, ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ್ತಿ ವೋಜ್ನಿಯಾಕಿ 3–6, 6–2, 7–5ರಲ್ಲಿ ಕ್ರೊವೇಷ್ಯಾದ ಜನಾ ಫೆಟ್‌ ವಿರುದ್ಧ ಗೆದ್ದರು.

ಈ ವಿಭಾಗದ ಇತರ ಪ್ರಮುಖ ಪಂದ್ಯಗಳಲ್ಲಿ ಎಲಿನಾ ಸ್ವಿಟೋಲಿನಾ 4–6, 6–2, 6–1ರಲ್ಲಿ ಕ್ಯಾಥರಿನಾ ಸಿನಿಯಾಕೊವಾ ಎದುರೂ, ಪೆಟ್ರಾ ಮಾರ್ಟಿಕ್‌ 6–4, 7–6ರಲ್ಲಿ ಇರಿನಾ ಬೇಗು ವಿರುದ್ಧವೂ, ಮಗ್ದಾ ಲಿನೆಟ್ಟೆ 7–6, 6–2ರಲ್ಲಿ ಡೇರಿಯಾ ಕಸಾತ್ಕಿನಾ ಮೇಲೂ, ಜೆಲೆನಾ ಒಸ್ಟಾಪೆಂಕೊ 6–3, 3–6, 6–4ರಲ್ಲಿ ದುವಾನ್‌ ಯಿಂಗ್‌ ಯಿಂಗ್‌ ವಿರುದ್ಧವೂ, ಕಿಕಿ ಬರ್ಟೆನ್ಸ್‌ 7–6, 6–0ರಲ್ಲಿ ನಿಕೊಲೆ ಗಿಬ್ಸ್‌ ಮೇಲೂ, ಅಲೈಜ್‌ ಕಾರ್ನೆಟ್‌ 6–4, 6–3ರಲ್ಲಿ ಜೂಲಿಯ ಜಾರ್ಜಸ್‌ ವಿರುದ್ಧವೂ, ಕಾರ್ಲಾ ಸ್ವಾರೆಜ್‌ 6–4, 2–6, 6–2ರಲ್ಲಿ ಟೈಮಿ ಬಾಬೊಸ್‌ ಮೇಲೂ ಗೆದ್ದರು.

ನಡಾಲ್‌ ಮಿಂಚು: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಮೂರನೇ ಸುತ್ತು ತಲುಪಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ನಡಾಲ್‌ 6–3, 6–4, 7–6ರಲ್ಲಿ ಅರ್ಜೆಂಟೀನಾದ ಲಿಯೊನಾರ್ಡೊ ಮೇಯರ್‌ ಸವಾಲು ಮೀರಿದರು. ಇತರ ಪಂದ್ಯಗಳಲ್ಲಿ ಜೋ ವಿಲ್ಫ್ರೆಡ್‌ ಸೊಂಗಾ 3–6, 6–3, 1–6, 7–6, 7–5ರಲ್ಲಿ ಡೆನಿಸ್‌ ಶಪೊಲೊವ್‌ ಎದುರೂ, ರ‍್ಯಾನ್‌ ಹ್ಯಾರಿಸನ್‌ 6–4, 7–6, 6–4ರಲ್ಲಿ ಪ್ಯಾಬ್ಲೊ ಕ್ಯುವಾಸ್‌ ವಿರುದ್ಧವೂ ಜಯದಾಖಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry