ನೋಬಾಲ್‌ನಲ್ಲಿ ಔಟಾದದ್ದು ಮರೆತುಬಿಟ್ಟಿರಾ...?

7

ನೋಬಾಲ್‌ನಲ್ಲಿ ಔಟಾದದ್ದು ಮರೆತುಬಿಟ್ಟಿರಾ...?

Published:
Updated:
ನೋಬಾಲ್‌ನಲ್ಲಿ ಔಟಾದದ್ದು ಮರೆತುಬಿಟ್ಟಿರಾ...?

ಬೆಂಗಳೂರು: ನೀವೂ ದಕ್ಷಿಣ ಆಫ್ರಿಕಾದಲ್ಲಿ ರನ್ ಔಟ್ ಆಗಿದ್ದೀರಿ, ಅದು ಕೂಡ ನೋಬಾಲ್‌ನಲ್ಲಿ. ಇದನ್ನು ಮರೆತುಬಿಟ್ಟಿರಾ...?

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ರನ್ ಔಟ್ ಆದ ಹಾರ್ದಿಕ್ ಪಾಂಡ್ಯ ಅವರನ್ನು ಟೀಕಿಸಿದ ಹಿರಿಯ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್ ಅವರಿಗೆ ಅಭಿಷೇಕ್‌ ಸಿನ್ಹಾ ಎಂಬುವರು ಕೇಳಿದ ಪ್ರಶ್ನೆ ಇದು. ಹಾರ್ದಿಕ್ ಪಾಂಡ್ಯ ಅವರನ್ನು ಟೀಕಿಸಿ ಮಾಡಿರುವ ಟ್ವೀಟ್‌ನಲ್ಲಿ ಮಾಂಜ್ರೇಕರ್‌ ‘ಹುಂಬತನದಿಂದಾಗಿ ಹೀಗೆ ಆಗುತ್ತಿದೆ. ಇಂಥ ವರ್ತನೆ ಮುಂದುವರಿದರೆ ಪಾಠ ಕಲಿಯಬೇಕಾದೀತು’ ಎಂದು ಹೇಳಿದ್ದರು.

ಇದಕ್ಕೆ ಟ್ವಿಟರ್‌ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ‘ಹುಂಬತನ ಎಂಬ ಪದ ಬಳಿಸಿದ್ದು ಸರಿಯಲ್ಲ. ಹಾಗಿದ್ದರೆ ರನ್ ಔಟ್‌ ಆಗುವವರೆಲ್ಲರೂ ಹುಂಬರೇ’ ಎಂದು ಪಾಂಡ್ಯ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಎ.ಕೆ.ದೀಪೇಶ್‌ ಎಂಬುವವರು ಸಂಜಯ್ ಮಾಂಜ್ರೇಕರ್ ಅವರ ಕ್ರಿಕೆಟ್‌ ಜೀವನದ ಅಂಕಿ ಅಂಶಗಳನ್ನು ಕಲೆ ಹಾಕಿದ್ದಾರೆ. ಅವರು 14 ಬಾರಿ ರನ್‌ ಔಟ್ ಆಗಿದ್ದನ್ನು ಉಲ್ಲೇಖಿಸಿ ಇದು ಹುಂಬತನದ ಪರಿಣಾಮವೇ ಎಂದು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry