ಬಿಎಫ್‌ಸಿಗೆ ಜಯದ ತವಕ

7
ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್‌; ಇಂದು ಮುಂಬೈ ಎದುರು ಪೈಪೋಟಿ

ಬಿಎಫ್‌ಸಿಗೆ ಜಯದ ತವಕ

Published:
Updated:

ಮುಂಬೈ: ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಡೈನಮೋಸ್‌ ಎದುರು ಹಿಂದಿನ ಪಂದ್ಯ ಸೋತಿದ್ದ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡ ಜಯದ ಹಾದಿಗೆ ಮರಳುವ ವಿಶ್ವಾಸದಲ್ಲಿದೆ.

ಸುನಿಲ್ ಚೆಟ್ರಿ ಬಳಗ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಪಂದ್ಯದಲ್ಲಿ ಗುರುವಾರ ಮುಂಬೈ ಸಿಟಿ ಎಫ್‌ಸಿ ಸವಾಲು ಎದುರಿಸಲಿದೆ.

ಹಿಂದಿನ ಮುಖಾಮುಖಿಯಲ್ಲಿ ತವರಿನಲ್ಲಿ ನಡೆದ ಪಂದ್ಯದಲ್ಲಿಯೇ ಬೆಂಗಳೂರು ತಂಡದ ಎದುರು ಸೋತಿದ್ದ ಮುಂಬೈ ತಂಡ ಈಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆಡಿದ ಹತ್ತು ಪಂದ್ಯಗಳಲ್ಲಿ ಈ ತಂಡ ನಾಲ್ಕರಲ್ಲಿ ಮಾತ್ರ ಗೆದ್ದಿದೆ.

ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು 14 ಪಾಯಿಂಟ್ಸ್‌ಗಳನ್ನು ಗಳಿಸಿದೆ.

ಡೆಲ್ಲಿ  ಎದುರಿನ ಸೋಲಿನ ಬಳಿಕ ಬೆಂಗಳೂರು ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಆಡಿದ 10 ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದೆ. ಈವರೆಗೂ ಒಂದೂ ಪಂದ್ಯ ಡ್ರಾ ಮಾಡಿಕೊಂಡಿಲ್ಲ. 18 ಪಾಯಿಂಟ್ಸ್‌ಗಳು ಈ ತಂಡದ ಖಾತೆಯಲ್ಲಿವೆ.

ತವರಿನಲ್ಲಿ ಮುಂಬೈ ತಂಡ ಬಿಎಫ್‌ಸಿ ಎದುರು ಎರಡನೇ ಪಂದ್ಯ ಆಡುತ್ತಿದೆ

ಹಿಂದಿನ ಪಂದ್ಯದಲ್ಲಿ ಬಿಎಫ್‌ಸಿ 2–0ರಲ್ಲಿ ಗೆದ್ದಿತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry