‘ಸತ್ಯ ಮತ್ತು ನ್ಯಾಯ’ ಸಮ್ಮೇಳನ ನಾಳೆಯಿಂದ

7

‘ಸತ್ಯ ಮತ್ತು ನ್ಯಾಯ’ ಸಮ್ಮೇಳನ ನಾಳೆಯಿಂದ

Published:
Updated:

ಬೆಂಗಳೂರು: ಜಮಾತೆ ಇಸ್ಲಾಮಿ ಹಿಂದ್‌ ವತಿಯಿಂದ ಇದೇ 19 ರಿಂದ 21ರವರೆಗೆ ‘ಸತ್ಯ ಮತ್ತು ನ್ಯಾಯ’ ಸಮ್ಮೇಳನವನ್ನು ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿಯ ಖುದ್ದೂಸ್‌ ಸಾಹೇಬ್‌ ಈದ್ಗಾ ಮೈದಾನದಲ್ಲಿ ಆಯೋಜಿಸಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಬೋರ್ಡ್‌ ಆಫ್‌ ಇಸ್ಲಾಮಿಕ್‌ ಎಜು ಕೇಷನ್‌ನ ಕಾರ್ಯದರ್ಶಿ ರಿಯಾಜ್‌ ಅಹಮದ್‌ ರೋಣ ಮಾಹಿತಿ ನೀಡಿ

ದರು. 19ರಂದು ಸಂಜೆ 6.30ಕ್ಕೆ ಯುವ ಸಂಸತ್ತು ಕಾರ್ಯಕ್ರಮವಿದೆ. ‘ಪ್ರಜಾಸತ್ತಾತ್ಮಕ ಭಾರತದಲ್ಲಿ ನ್ಯಾಯದ ಕಲ್ಪನೆ’ ಕುರಿತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಮಾತನಾಡಲಿದ್ದಾರೆ. ಇದೇ 20ರಂದು ಸಂಜೆ 6.30ಕ್ಕೆ ‘ಬಹು ಸಂಸ್ಕೃತಿಯ ಭಾರತದಲ್ಲಿ ನ್ಯಾಯ ಮತ್ತು ಸಮಾನತೆ, ಪಂಥಾಹ್ವಾನಗಳು ಮತ್ತು ಪರಿಹಾರ’ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಇದೇ 21ರಂದು ಬೆಳಿಗ್ಗೆ 10.30ಕ್ಕೆ  ‘ಕನ್ನಡ ಕುರ್‌ಆನ್‌ ಪ್ರವಚನ’ ಇರಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry