ರಾಹುಲ್‌ ಭೇಟಿ: ಕೆಪಿಸಿಸಿಯಿಂದ ತಾತ್ಕಾಲಿಕ ಪ್ರವಾಸ ಪಟ್ಟಿ‌ ಪ್ರಕಟ

6

ರಾಹುಲ್‌ ಭೇಟಿ: ಕೆಪಿಸಿಸಿಯಿಂದ ತಾತ್ಕಾಲಿಕ ಪ್ರವಾಸ ಪಟ್ಟಿ‌ ಪ್ರಕಟ

Published:
Updated:
ರಾಹುಲ್‌ ಭೇಟಿ: ಕೆಪಿಸಿಸಿಯಿಂದ ತಾತ್ಕಾಲಿಕ ಪ್ರವಾಸ ಪಟ್ಟಿ‌ ಪ್ರಕಟ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ. 10ರಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಕೆಪಿಸಿಸಿ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿದೆ.

10ರಂದು ಹೊಸಪೇಟೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಾವೇಶ ನಡೆಯಲಿದೆ. ನಂತರದ ಎರಡು ದಿನ ಬೆಂಗಳೂರಿನಲ್ಲಿ ವಿವಿಧ ಹಂತದ ಸಭೆ ನಡೆಸಲು

ನಿರ್ಧರಿಸಲಾಗಿದೆ.

ಪಕ್ಷದ ಕಾರ್ಯಕ್ರಮದ ಹೊರತಾಗಿ ವಿದ್ಯಾರ್ಥಿಗಳು, ರೈತರು, ಪ್ರಗತಿಪರ ಚಿಂತಕರು, ಐಟಿ ಕ್ಷೇತ್ರ ಪ್ರಮುಖರ ಜೊತೆ ರಾಹುಲ್ ಸಂವಾದ ಏರ್ಪಡಿಸಲು ಕೆಪಿಸಿಸಿ ಚರ್ಚೆ ನಡೆಸಿದೆ. ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ ನಂತರ ಈ ವೇಳಾಪಟ್ಟಿ ಅಂತಿಮಗೊಳ್ಳಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಮಠ, ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ರೀತಿಯಲ್ಲೇ ರಾಹುಲ್ ಗಾಂಧಿ ಅವರನ್ನೂ ಮಠ, ದೇವಸ್ಥಾನಗಳಿಗೆ ಕರೆದುಕೊಂಡು ಹೋಗಲು ಕಾಂಗ್ರೆಸ್‌ ವಲಯದಲ್ಲಿ ಚಿಂತನೆ ನಡೆದಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಮಠ, ಸುತ್ತೂರು ಮಠ ಅಥವಾ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಜಿಲ್ಲಾ ಘಟಕಗಳೊಂದಿಗೆ ಸಭೆ:

ಪಕ್ಷದಲ್ಲಿ ಗೊಂದಲವಿರುವ ಜಿಲ್ಲಾ ಘಟಕಗಳ ಪದಾಧಿಕಾರಿಗಳ ಜೊತೆ ಕಾಂಗ್ರೆಸ್‌ ಉಸ್ತುವಾರಿ  ವೇಣುಗೋಪಾಲ್ ಬುಧವಾರ ಸಭೆ ನಡೆಸಿದರು. ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪದಾಧಿಕಾರಿಗಳಿಗೆ ಅವರು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry