ಷಡ್ಯಂತ್ರದಲ್ಲಿ ಮೋದಿ ಕೈವಾಡ: ತೊಗಾಡಿಯಾ ಹೊಸ ಬಾಂಬ್‌

7

ಷಡ್ಯಂತ್ರದಲ್ಲಿ ಮೋದಿ ಕೈವಾಡ: ತೊಗಾಡಿಯಾ ಹೊಸ ಬಾಂಬ್‌

Published:
Updated:
ಷಡ್ಯಂತ್ರದಲ್ಲಿ ಮೋದಿ ಕೈವಾಡ: ತೊಗಾಡಿಯಾ ಹೊಸ ಬಾಂಬ್‌

ಅಹಮದಾಬಾದ್‌: ‘ನನ್ನ ವಿರುದ್ಧದ ಷಡ್ಯಂತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈವಾಡವಿದೆ’ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಬುಧವಾರ ನೇರವಾಗಿ ಆರೋಪಿಸಿದ್ದಾರೆ.

‘ದೆಹಲಿಯ ಪ್ರಭಾವಿ ರಾಜಕೀಯ ನಾಯಕರ ಸೂಚನೆಯ ಮೇರೆಗೆ ಜಂಟಿ ಪೊಲೀಸ್‌ ಆಯುಕ್ತ ಜೆ.ಕೆ. ಭಟ್‌ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ’ಎಂದು ಅವರು ಆರೋಪಿಸಿದ್ದಾರೆ.

‘ಮೋದಿ ಸೂಚನೆಯ ಮೇರೆಗೆ ಕ್ರೈಂ ಬ್ರ್ಯಾಂಚ್‌ ತಮ್ಮ ವಿರುದ್ಧ ಪಿತೂರಿ ನಡೆಸಿದೆ. ಭಟ್‌ ಅವರ ದೂರವಾಣಿ ಕರೆಗಳ ವಿವರ ಪರಿಶೀಲಿಸಬೇಕು. ಕಳೆದ 15 ದಿನದಲ್ಲಿ ಅವರು ಎಷ್ಟು ಬಾರಿ ಪ್ರಧಾನಿಯ ಜತೆ ಮಾತನಾಡಿದ್ದಾರೆ ಎನ್ನುವುದು ಬಹಿರಂಗವಾಗುತ್ತದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry