ಕಾರಿನ ಗಾಜು ಒಡೆದು ₹3.5 ಲಕ್ಷ ಕಳವು

7

ಕಾರಿನ ಗಾಜು ಒಡೆದು ₹3.5 ಲಕ್ಷ ಕಳವು

Published:
Updated:

ಬೆಂಗಳೂರು: ಕೊಡಿಗೇಹಳ್ಳಿಯಲ್ಲಿ ಕಾರಿನ ಗಾಜು ಒಡೆದಿರುವ ದುಷ್ಕರ್ಮಿಗಳು, ಅದರಲ್ಲಿದ್ದ ₹3.5 ಲಕ್ಷ ನಗದು ಕದ್ದಿದ್ದಾರೆ.

ಉದ್ಯಮಿ ಬಾಬು ಎಂಬುವರು ಸ್ಥಳೀಯ ಎಕ್ಸಿಸ್ ಬ್ಯಾಂಕ್‍ ಶಾಖೆಗೆ ಬುಧವಾರ ಬೆಳಿಗ್ಗೆ ಬಂದಿದ್ದರು. ನಗದು ಡ್ರಾ ಮಾಡಿಕೊಂಡು ಕಾರಿನಲ್ಲಿ ಮನೆಯತ್ತ ಹೊರಟಿದ್ದರು. ಟೀ ಕುಡಿಯಲೆಂದು ರಸ್ತೆಯ ಪಕ್ಕದಲ್ಲಿ ಕಾರು ನಿಲ್ಲಿಸಿ ಹೋಟೆಲೊಂದಕ್ಕೆ ಹೋಗಿದ್ದರು.

ಅವರ ಕಾರು ಹಿಂಬಾಲಿಸಿಕೊಂಡು ಎರಡು ಬೈಕ್‌ನಲ್ಲಿದ್ದ ಬಂದಿದ್ದ ಐವರು, ಕಾರಿನ ಗಾಜು ಒಡೆದು ನಗದು ಕದ್ದೊಯ್ದಿದ್ದಾರೆ. ಈ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಉದ್ಯಮಿ ನೀಡಿರುವ ದೂರಿನನ್ವಯ ಕೊಡಿಗೇಹಳ್ಳಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry