ಪ್ರವರ್ಗ–1ಕ್ಕೆ ‘ಕಾಡುಗೊಲ್ಲ’ ಸೇರ್ಪಡೆ

7

ಪ್ರವರ್ಗ–1ಕ್ಕೆ ‘ಕಾಡುಗೊಲ್ಲ’ ಸೇರ್ಪಡೆ

Published:
Updated:

ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ–1ರ ಗೊಲ್ಲ ಜಾತಿಯೊಂದಿಗೆ ‘ಕಾಡುಗೊಲ್ಲ’ ಸಮುದಾಯವನ್ನು ಸೇರಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಪ್ರವರ್ಗ–1ರ ಪಟ್ಟಿಯ ಗೊಲ್ಲ ಜಾತಿಯೊಂದಿಗೆ ‘ಕಾಡುಗೊಲ್ಲ’ ಸಮುದಾಯವನ್ನು ‘ಹಟ್ಟಿಗೊಲ್ಲ’ ಎಂಬ ಪರ್ಯಾಯ ಪದದೊಂದಿಗೆ ಸೇರ್ಪಡೆ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

‘ಕಾಡುಗೊಲ್ಲ ಸಮುದಾಯವನ್ನು ಜಾತಿ ಪಟ್ಟಿಗೆ ಸೇರಿಸಬೇಕು’ ಎಂದು ಹಿರಿಯ ವಕೀಲ ಸಿ.ಎಸ್. ದ್ವಾರಕಾನಾಥ್, ನಟ ಚೇತನ್‌ ಮತ್ತು ಸಮುದಾಯದ ಪ್ರಮುಖರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry