ಹವ್ಯಕ ಮಹಾಸಭಾದಿಂದ ‘ಪ್ರತಿಬಿಂಬ’

7

ಹವ್ಯಕ ಮಹಾಸಭಾದಿಂದ ‘ಪ್ರತಿಬಿಂಬ’

Published:
Updated:
ಹವ್ಯಕ ಮಹಾಸಭಾದಿಂದ ‘ಪ್ರತಿಬಿಂಬ’

ಬೆಂಗಳೂರು: ನಮ್ಮೊಳಗೆ ಸುಪ್ತವಾಗಿರುವ ಕಲೆಗಳನ್ನು ಹೊರತರಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ ಎಂದು ಮನೋವೈದ್ಯ ಡಾ. ಕೆ. ಆರ್. ಶ್ರೀಧರ್ ತಿಳಿಸಿದರು.

ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ‘ಪ್ರತಿಬಿಂಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗೆ ಸ್ತೋತ್ರಗಾಯನ, ಛದ್ಮವೇಷ, ಭಗವದ್ಗೀತೆ, ಏಕಪಾತ್ರಾಭಿನಯ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆ, ಹಿರಿಯರಿಗೆ ರಂಗೋಲಿ ಬಿಡಿಸುವುದು, ಸಾಂಪ್ರದಾಯಿಕ ಗೀತೆ ಹಾಡುವುದು, ಸವಿ ರುಚಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹವ್ಯಕ ಕಲಾವಿದರ ನಾದ-ನಿನಾದ, ಯಕ್ಷ ನೃತ್ಯ, ಕೋಲಾಟ, ಹಾಸ್ಯ ಕಾರ್ಯಕ್ರಮಗಳು ಕಲಾಭಿಮಾನಿಗಳನ್ನು ರಂಜಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry