ಗಣೆ ಗೌರವಕ್ಕೆ ನಾಗವಾರ ಆಯ್ಕೆ

7

ಗಣೆ ಗೌರವಕ್ಕೆ ನಾಗವಾರ ಆಯ್ಕೆ

Published:
Updated:

ಶಿರಾ: ತಾಲ್ಲೂಕಿನ ಜುಂಜಪ್ಪನಗುಡ್ಡೆಯಲ್ಲಿ ಫೆ.13 ರಂದು ನಡೆಯಲಿರುವ ಶಿವೋತ್ಸವ ಕಾರ್ಯಕ್ರಮದಲ್ಲಿ ಜನಪದ ವಿದ್ವಾಂಸ ಹಾಗೂ ಲೇಖಕ ಕಾಳೇಗೌಡ ನಾಗವಾರ ಅವರಿಗೆ ಗಣೆ ಗೌರವ ಸಲ್ಲಿಸುವುದಾಗಿ ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆಯ ಮುಖಂಡ ಗೋಮಾರದಹಳ್ಳಿ ಮಂಜುನಾಥ್ ತಿಳಿಸಿದ್ದಾರೆ.

ಶಿವರಾತ್ರಿ ಹಬ್ಬದಂದು ಗಣೆ ಗೌರವ ಸಲ್ಲಿಸುವ ಸಂಪ್ರದಾಯವನ್ನು ಮೂರು ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗಣೆ ಗೌರವಕ್ಕೆ ಭಾಜನರಾದವರನ್ನು ಕರಿ ಕಂಬಳಿಯ ಮೇಲೆ

ಕೂರಿಸಿ ಮುತ್ತುಗದ ಹೂವಿನ ಪುಷ್ಪಾರ್ಚನೆಯೊಂದಿಗೆ ಗಣೆ ನೀಡಲಾಗುತ್ತದೆ. ₹ 5 ಸಾವಿರ ನಗದು ಸಹ ನೀಡಲಾಗುವುದು ಎಂದೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry