ವಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಫೊಟೋಗ್ರಾಫರ್ ವಿರುದ್ಧ ಪ್ರಕರಣ

7

ವಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಫೊಟೋಗ್ರಾಫರ್ ವಿರುದ್ಧ ಪ್ರಕರಣ

Published:
Updated:
ವಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಫೊಟೋಗ್ರಾಫರ್ ವಿರುದ್ಧ ಪ್ರಕರಣ

ಮಂಗಳೂರು: ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ನಗರದ ಪತ್ರಿಕೆಯೊಂದರ ಫೊಟೋಗ್ರಾಫರ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀಡಿಯಾ ಆಂಡ್ ರೈ ಸರ್ ಎನ್ನುವ ಗ್ರೂಪ್ ನಲ್ಲಿ ಫೊಟೋಗ್ರಾಫರ್ ಸುಧಾಕರ ಎರ್ಮಾಳ, ಧರ್ಮವನ್ನು ಅವಹೇಳನ ಮಾಡುವ ಪೋಸ್ಟ್ ಹಾಕಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಪುರಸಭೆ ಸದಸ್ಯ ಮುನೀಶ್ ಅಲಿ ಅಹ್ಮದ್ ಸೋಮವಾರ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು, ಈ ಸಂದೇಶ ಹಾಕಿರುವ ಸುಧಾಕರ ಎರ್ಮಾಳಗಾಗಿ ಹುಡುಕಾಟ ನಡೆಸಿದ್ದಾರೆ. ಬುಧವಾರ ರಾತ್ರಿ ಎರ್ಮಾಳ ಅವರ ಮನೆಗೆ ಹೋಗಿದ್ದ ಪೊಲೀಸರು, ಬರುಗೈಲಿ ಹಿಂದಿರುಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry