ಕಾಸರಗೋಡಿನಲ್ಲಿ ಭಾಷಾ ಉತ್ಸವ: ಶಿಫಾರಸು

7

ಕಾಸರಗೋಡಿನಲ್ಲಿ ಭಾಷಾ ಉತ್ಸವ: ಶಿಫಾರಸು

Published:
Updated:

ಕಾಸರಗೋಡು: ‘ಕನಿಷ್ಠ ಏಳು ಭಾಷೆಗಳ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ವೈವಿಧ್ಯಮಯ ಭಾಷಾ ಮಹೋತ್ಸವವವನ್ನು ನಡೆಸಲು

ಸರ್ಕಾರಕ್ಕೆ ಶಿಫಾರಸು ಮಾಡಲಾಗು ವುದು’ ಎಂದು ಯುವಜನ ವ್ಯವಹಾರಗಳ ಹಾಗೂ ಯುವಜನ ಕಲ್ಯಾಣ

ಶಾಸಕಾಂಗ  ಸಮಿತಿಯ ಅಧ್ಯಕ್ಷ ಟಿ. ವಿ. ರಾಜೇಶ್ ಹೇಳಿದರು.

ಕಾಸರಗೋಡು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ವಿವಿಧ ಅಕಾಡೆಮಿಗಳ ಸಹಾಯ ದಲ್ಲಿ ಭಾಷಾ ಮಹೋತ್ಸವ  ನಡೆಸಬೇಕು. ಎಲ್ಲಾ ಭಾಷೆಗಳ ಪರಿ ಪೋಷಣೆಗೆ ಅಗತ್ಯವಾದ ಸಾಹಿತ್ಯ -ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆ ಯಬೇಕು. ಇಲ್ಲಿಗೆ ಪ್ರತ್ಯೇಕವಾದ ಯುವಜನ ನೀತಿಯನ್ನು ರಚಿಸಬೇಕಾಗಿದೆ. ಮಂಜೇಶ್ವರದ ಕಬಡ್ಡಿ ಅಕಾಡೆ ಮಿಯ ಪುನರುಜ್ಜೀವನಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಸಿಂಥೆಟಿಕ್ ಟ್ರಾಕ್ ಹಾಗೂ ಯುವ ಜನರಿಗೆ ಒಂದು ಹಾಸ್ಟೆಲ್ ನಿರ್ಮಾಣ, ಚಿತ್ತಾರಿಕ್ಕಲ್ - ಈಸ್ಟ್ ಎಳೇರಿಯಲ್ಲಿ ರಿವರ್ ರಾಫ್ಟಿಂಗ್ ಸಾಹಸಿಕ ಪ್ರವಾ ಸೋದ್ಯಮ, ಚೀಮೇನಿಯಲ್ಲಿ ಪ್ರಸ್ತಾ ಪಿತ ಐ .ಟಿ. ಆಧಾರಿತ ಕೈಗಾರಿಕಾ ಪಾರ್ಕ್ ಶೀಘ್ರದಲ್ಲೇ ಸ್ಥಾಪಿಸಲು ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.

ಸಿಟ್ಟಿಂಗ್ ನಲ್ಲಿ ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ,ಎ ಡಿ ಎಂ ಎನ್. ದೇವಿದಾಸ್ , ಬೇಕಲ ಪ್ರವಾ ಸೋದ್ಯಮ ನಿಗಮದ ಎಂ. ಡಿ.

ಕೆ. ಮನ್ಸೂರ್, ಜಿಲ್ಲಾ ಯುವ ಜನ ಸಂಯೋಜಕ ಎ.ವಿ.ಶಿವ ಪ್ರಸಾದ್, ಯುವಜನ ಕಾರ್ಯ ಕ್ರಮಗಳ ಅಧಿಕಾರಿ ಪ್ರಸೀದಾ

ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry