ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

7
ಎಬಿವಿಪಿ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ವಿದ್ಯಾರ್ಥಿಗಳ ಆಕ್ರೋಶ

ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

Published:
Updated:
ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ಬಾದಾಮಿ: ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿ ರುವ ಮೆಟ್ರಿಕ್‌ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ನಿಲಯಗಳಲ್ಲಿ ಮೂಲ ಸೌಕರ್ಯಕ್ಕಾಗಿ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಯ ಎದುರಿಗೆ ಎಬಿವಿಪಿ ಕಾರ್ಯಕರ್ತರು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು

ಜಯನಗರದಲ್ಲಿ ಪರಿಶಿಷ್ಟ ಜಾತಿ ವಸತಿ ನಿಲಯದ ನೂತನ ಕಟ್ಟಡ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ಕೈಗೊಂಡು ನಾಲ್ಕು ವರ್ಷಗಳು ಗತಿಸಿವೆ. ನಿವೇಶನದಲ್ಲಿ ಕಲ್ಲು, ಮರಳು ಬಿದ್ದಿದೆ. ಆದರೆ ಇದುವರೆಗೂ ಕಟ್ಟಡ ಕಾಮಗಾರಿ ಆರಂಭವಾಗಿಲ್ಲ. ಕಟ್ಟಡ ಕಾಮಗಾರಿ ಬೇಗ ಆರಂಭಿಸಲು ಒತ್ತಾಯಿಸಿದರು.

ಬೆಳಿಗ್ಗೆ 10 ಗಂಟೆಗೆ ಬಂದ ಪ್ರತಿಭನಾಕಾರರು ಮಧ್ಯಾಹ್ನ 12.30 ಗಂಟೆಯಾದರೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕಾರ್ಯಾಲಯಕ್ಕೆ ಬಾರದ ಕಾರಣ ಅಧಿಕಾರಿಗಳು ಭರವಸೆ ಕೊಡುವ ಹೊರತು ನಾವು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಅಧಿಕಾರಿ ವಿರುದ್ಧ ಘೋಷಣೆ ಕೂಗಿದರು.

ಜಯನಗರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಲಯದಲ್ಲಿ 120 ವಿದ್ಯಾರ್ಥಿ ಗಳು ಇದ್ದೇವೆ. ಇಲ್ಲಿ 10 ಕೊಠಡಿ ಇವೆ. ಸರಿಯಾಗಿ ಶೌಚಾಲಯ, ಮೂತ್ರಾಲಯ ಇಲ್ಲ. ಕುಡಿವ ನೀರಿನ ತೊಂದರೆ ಮತ್ತು ವಸತಿ ನಿಲಯದ ಮೇಲ್ವಿಚಾರಕ ಆರ್‌.ಎಲ್.ನದಾಫ ಸರಿಯಾಗಿ ಬರುವುದಿಲ್ಲ. ಸಾರ್ವಜನಿಕರು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳು ಯಾವುದೇ ತಪ್ಪು ಮಾಡದಿದ್ದರೂ ಸಾರ್ವಜನಿಕರಿಂದ ಕೆಲವರು ಏಟು ತಿಂದಿದ್ದೇವೆ. ಬೇಗನೆ ನಮಗೆ ವಸತಿ ನಿಲಯದ ಕಟ್ಟಡ ಕಾಮಗಾರಿಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಹೊರವಲಯದ ವೀರಭದ್ರೇಶ್ವರ ಗುಡಿ ಸಮೀಪದ ಮೆಟ್ರಿಕ್‌ ನಂತರದ ಪರಿಶಿಷ್ಟ ಪಂಗಡದ ವಸತಿ ನಿಲಯವೂ ಬಾಡಿಗೆ ಕಟ್ಟಡದಲ್ಲಿದೆ. 90 ಜನ ವಿದ್ಯಾರ್ಥಿಗಳಿದ್ದೇವೆ. ಐದು ಕೊಠಡಿಗಳಲ್ಲಿ ವಾಸವಾಗಿದ್ದೇವೆ. ಇಲ್ಲಿಯೂ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದೇವೆ ಎಂದು ವಿದ್ಯಾರ್ಥಿಗಳು ದೂರಿದರು.

‘ಅನುದಾನ ಕಡಿಮೆಯಾದ ಕಾರಣ ಕಾಮಗಾರಿ ಆರಂಭವಾಗಿಲ್ಲ. ಈಗ ಮತ್ತೆ ₹ 4 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ತಯಾರಿಸಲಾಗಿದೆ ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ’ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಚ್‌.ಎಂ. ಪಾಟೀಲ ವಿದ್ಯಾರ್ಥಿಗಳಿಗೆ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ನಗರ ಎಬಿವಿಪಿ ಕಾರ್ಯದರ್ಶಿ ರವಿ ವಡ್ಡರ, ಸಂಚಾಲಕ ರಿಯಾಜ್‌ ಹೊಂಡದಕಟ್ಟಿ, ಪುನೀತ ಮಡಿವಾಳರ, ನವೀನ ಗೌಡರ, ಜಮಾಲ ರೋಣದ, ಪ್ರಕಾಶ ಅಮರಗೋಳ,ರಂಗಪ್ಪ ಮುಕ್ಕನ್ನವರ, ಕೃಷ್ಣ ಹಂಡಿ ಉಮೇಶ ಸೂಳಿಕಲ್‌, ಅನೀಲ, ಶಂಕರ, ಮಂಜುನಾಥ ಕಾರಬಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry