ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ, ಒಬ್ಬ ಭಾರತೀಯ ಯೋಧ ಹುತಾತ್ಮ

7

ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ, ಒಬ್ಬ ಭಾರತೀಯ ಯೋಧ ಹುತಾತ್ಮ

Published:
Updated:
ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ, ಒಬ್ಬ ಭಾರತೀಯ ಯೋಧ ಹುತಾತ್ಮ

ಶ್ರೀನಗರ: ಜಮ್ಮುಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ, ನಾಗರಿಕರು ಮತ್ತು ಭಾರತೀಯ  ಯೋಧರ ಮೇಲೆ ಶೆಲ್ ದಾಳಿ ನಡೆಸಿದೆ. ಒಬ್ಬ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದಾರೆ.

ಪಾಕಿಸ್ತಾನದ ಈ ದಾಳಿಯಲ್ಲಿ ನೀಲಮ್ ದೇವಿ(17) ಎಂಬ ಯುವತಿಯು ಸಾವಿಗೀಡಾಗಿದ್ದಾಳೆ. ಒಬ್ಬ ಯೋಧ ಹಾಗೂ 5 ಮಂದಿ ನಾಗರಿಕರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೃತ ಯೋಧನನ್ನು ಎ. ಸುರೇಶ್ ಎಂದು ಗುರುತಿಸಲಾಗಿದೆ. ತಮಿಳುನಾಡಿನವರಾದ ಇವರು ಬಿಎಸ್‌ಎಫ್ ಪಡೆಯ 78 ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಪಾಕಿಸ್ತಾನ ಯೋಧರು ಆರ್‌.ಎಸ್ ಪುರ, ಅಮಿಯಾ, ರಾಮ್‌ಘರ್ ವಲಯದಲ್ಲಿ ಶೆಲ್‌ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ.  ಗಡಿ ಭಾಗದಲ್ಲಿನ 20 ಗುಡ್ಡಗಾಡು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಯೋಧರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry