ರಸ್ತೆ ಡಾಂಬರೀಕರಣಗೊಳಿಸಿ

7

ರಸ್ತೆ ಡಾಂಬರೀಕರಣಗೊಳಿಸಿ

Published:
Updated:
ರಸ್ತೆ ಡಾಂಬರೀಕರಣಗೊಳಿಸಿ

ಬಸವಕಲ್ಯಾಣ: ತಾಲ್ಲೂಕಿನ ಕಾದೆಪುರದಿಂದ ಗೋರಟಾ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಡಾಂಬರೀಕರಣಗೊಳಿಸಬೇಕು.

ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹುಲಸೂರನಿಂದ ಹುಮನಾಬಾದ್ ಗೆ ಹೋಗಲು ಅನುಕೂಲಕರವಾಗಿದೆ. ಸುತ್ತಲಿನ ಗ್ರಾಮದ ಜನರಿಗೆ ಬಸವಕಲ್ಯಾಣದಿಂದ ಹುಮನಾಬಾದ್ ಗೆ ಹೋಗಲು ಸಾಕಷ್ಟು ದೂರ ಕ್ರಮಿಸಬೇಕಾಗುತ್ತದೆ. ರಸ್ತೆ ಡಾಂಬರೀಕರಣ ಮಾಡಿದರೆ ಹತ್ತಾರು ಕಿ.ಮೀ ನಷ್ಟು ಸುತ್ತಿ ಬಳಸಿ ಹೋಗುವುದು ತಪ್ಪುತ್ತದೆ.

ರಸ್ತೆಯ ಡಾಂಬರೀಕರಣಕ್ಕಾಗಿ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. ಇನ್ನು ಮುಂದಾದರೂ ಸಂಬಂಧಪಟ್ಟವರು ಗಮನಹರಿಸಬೇಕು.

ವೀರೇಶ ಧನ್ನೂರೆ, ಗ್ರಾಮಸ್ಥ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry