ಹಡಗಿನಲ್ಲಿ ಬೆಂಕಿ ಅವಘಡ; 26 ಮಂದಿ ರಕ್ಷಣೆ, ಸಮುದ್ರಕ್ಕೆ ತೈಲ ಸೋರಿಕೆಯಾಗಿಲ್ಲ

7

ಹಡಗಿನಲ್ಲಿ ಬೆಂಕಿ ಅವಘಡ; 26 ಮಂದಿ ರಕ್ಷಣೆ, ಸಮುದ್ರಕ್ಕೆ ತೈಲ ಸೋರಿಕೆಯಾಗಿಲ್ಲ

Published:
Updated:
ಹಡಗಿನಲ್ಲಿ ಬೆಂಕಿ ಅವಘಡ; 26 ಮಂದಿ ರಕ್ಷಣೆ, ಸಮುದ್ರಕ್ಕೆ ತೈಲ ಸೋರಿಕೆಯಾಗಿಲ್ಲ

ಅಹಮದಾಬಾದ್: ಗುಜರಾತ್‌ ಕರಾವಳಿಯ ಅರಬ್ಬಿ ಸಮದ್ರದಲ್ಲಿ ತೈಲ ಸಾಗಣೆ ಮಾಡುತ್ತಿದ್ದ ವ್ಯಾಪಾರಿ ಹಡಗಿನಲ್ಲಿ ಬುಧವಾರ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ. ಈ ಘಟನೆಯಿಂದಾಗಿ ಹಡಗಿನ ಟ್ಯಾಂಕರ್‌ನಿಂದ ಸಮುದ್ರಕ್ಕೆ ತೈಲ ಸೋರಿಕೆಯಾಗಿಲ್ಲ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

30 ಸಾವಿರ ಟನ್‌ ‘ಹೈ ಸ್ಪೀಡ್‌ ಡೀಸೆಲ್‌’ಅನ್ನು ಹಡಗಿನ ಟ್ಯಾಂಕರ್‌ನಲ್ಲಿ ಸಾಗಿಸಲಾಗುತ್ತಿತ್ತು. ಕಾಂಡ್ಲಾದ ಡಿನೆಯಾಲ್‌ ಬಂದರಿನಿಂದ 15 ನಾಟಿಕಲ್ ಮೈಲು ದೂರಲ್ಲಿದ್ದ ಎಂಟಿ ಜೆನೆಸ್ಸಾ ತೈಲ ಸಾಗಣೆ ಟ್ಯಾಂಕರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿನ ನಂದಿಸುವ ಕಾರ್ಯಾಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಹಡಗಿನಲ್ಲಿದ್ದ ಎಲ್ಲಾ 26 ಮಂದಿಯನ್ನು ಭಾರತಿಯ ಕರಾವಳಿ ಪಡೆ ರಕ್ಷಿಸಿದೆ. ಅದರಲ್ಲಿ ಇಬ್ಬರಿಗೆ ಸುಟ್ಟಗಾಯಗಳಾಗಿವೆ ಎಂದು ವರದಿಯಾಗಿದೆ.

‘ಟ್ಯಾಂಕರ್‌ನಿಂದ ಯಾವುದೆ ತೈಲ ಸಮುದ್ರಕ್ಕೆ ಸೋರಿಕೆಯಾಗಿಲ್ಲ’ ಎಂದು ರಕ್ಷಣಾ ಇಲಾಖೆಯ ಗುಜರಾತ್‌ ವಿಭಾಗದ ಅಭಿಷೇಕ್‌ ಮಾಟಿಮಾನ್‌ ತಿಳಿಸಿದ್ದಾರೆ.

ಸಂಭವನೀಯ ವಿಪತ್ತನ್ನು ತಪ್ಪಿಸಲು ಕರಾವಳಿ ಪಡೆ ಬುಧವಾರ ರಾತ್ರಿಯಿಡೀ ದಣಿವರಿಯದೆ ಕಾರ್ಯ ನಿರ್ವಹಿಸಿದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry