ರಾಜು ಕನ್ನಡ ಮೀಡಿಯಂ

7

ರಾಜು ಕನ್ನಡ ಮೀಡಿಯಂ

Published:
Updated:
ರಾಜು ಕನ್ನಡ ಮೀಡಿಯಂ

ಕೆ.ಎ. ಸುರೇಶ್ ನಿರ್ಮಾಣದ ಅದ್ದೂರಿ ಚಿತ್ರ ‘ರಾಜು ಕನ್ನಡ ಮೀಡಿಯಂ’. ಸುದೀಪ್ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುರುನಂದನ್ ಅಭಿನಯದ ಈ ಚಿತ್ರದ ನಿರ್ದೇಶನ ನರೇಶ್ ಕುಮಾರ್ ಅವರದ್ದು. ಸಂಗೀತ ನಿರ್ದೇಶನ ಕಿರಣ್ ರವೀಂದ್ರನಾಥ್ ಅವರದ್ದು. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಹಾಗೂ ಏಂಜಲೀನಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ತಾರಾಗಣದಲ್ಲಿ ಇದ್ದಾರೆ.

*

3 ಘಂಟೆ 30 ದಿನ 30 ಸೆಕೆಂಡ್ 

ಇದು ಅಸಲಿ ಬದುಕಿನ ಆಟ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಂದ್ರಶೇಖರ ಪದ್ಮಶಾಲಿ ಇದರ ನಿರ್ಮಾಪಕರು. ಇದರ ನಿರ್ದೇಶನ ಮಧುಸೂದನ್ ಅವರದ್ದು. ಅರುಣ್ ಗೌಡ, ಕಾವ್ಯಾ ಶೆಟ್ಟಿ, ದೇವರಾಜ್, ಸುಧಾರಾಣಿ, ಎಡಕಲ್ಲು ಚಂದ್ರಶೇಖರ್, ಜಯಲಕ್ಷ್ಮಿ ಪಾಟೀಲ್ ಮತ್ತು ಇತರರು ತಾರಾಬಳಗದಲ್ಲಿ ಇದ್ದಾರೆ. ಶ್ರೀಧರ್ ವಿ. ಸಂಭ್ರಮ್ ಈ ಚಿತ್ರದ ಸಂಗೀತ ನಿರ್ದೇಶಕರು.

*

ನೀನಿಲ್ಲದ ಮಳೆ

ಡಾ. ಶೈಲೇಂದ್ರ ಕೆ. ಬೆಲ್ದಾಳ್, ದೇವರಾಜ್ ಶಿಡ್ಲಘಟ್ಟ ಮತ್ತು ಜನಾರ್ಧನ್ ನಿರ್ಮಿಸಿರುವ ಚಿತ್ರ ಇದು. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಸಿದ್ಧಪಡಿಸಲಾಗಿದೆ. ಇದರ ನಿರ್ದೇಶನ ಅಮೋಘ್ ಅವರದ್ದು. ವಿಶಾಲ್ ಛಾಯಾಗ್ರಹಣ, ಇಂದ್ರಸೇನ ಸಂಗೀತ ಈ ಚಿತ್ರಕ್ಕಿದೆ. ಗಿರೀಶ ಕಾರ್ನಾಡ, ತಬಲಾ ನಾಣಿ, ಭವ್ಯಾ, ಮನ್‌ದೀಪ್ ರಾಯ್, ಲಕ್ಕಿ ಶಂಕರ್, ರಾಕ್‍ಲೈನ್ ಸುಧಾಕರ್, ಲಕ್ಷ್ಮಣ್, ಇತಿ ಆಚಾರ್ಯಾ, ಮೋನಿಕಾ ತಾರಾಗಣದಲ್ಲಿ ಇದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry