ಒಗ್ಗರಣೆ ಡಬ್ಬಿಗೆ 1250ರ ಸಂಭ್ರಮ

7

ಒಗ್ಗರಣೆ ಡಬ್ಬಿಗೆ 1250ರ ಸಂಭ್ರಮ

Published:
Updated:
ಒಗ್ಗರಣೆ ಡಬ್ಬಿಗೆ 1250ರ ಸಂಭ್ರಮ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಒಗ್ಗರಣೆ ಡಬ್ಬಿ ಕಾರ್ಯಕ್ರಮ ಮಕರ ಸಂಕ್ರಾಂತಿಯಂದು 1250ನೇ ಸಂಚಿಕೆಯನ್ನು ‍ಪೂರ್ಣಗೊಳಿಸಿತು. ಕನ್ನಡ ಕಿರುತೆರೆಯಲ್ಲಿ ಅಡುಗೆ ಕಾರ್ಯಕ್ರಮ ಇಷ್ಟು ಸಂಚಿಕೆಗಳನ್ನು ಪೂರೈಸಿರುವುದು ಇದೇ ಮೊದಲು.

ಶುಶ್ರುತ್ ಎಂಟರ್‌ ಪ್ರೈನರ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮಕ್ಕೆ ಮುರಳಿ ಅವರ ನಿರೂಪಣೆ ಇದೆ. ಸಸ್ಯಾಹಾರ ಮತ್ತು ಮಾಂಸಾಹಾರದ ಅಡುಗೆಗಳು, ಆರೋಗ್ಯದ ಅಡುಗೆಗಳು, ಸೌಂದರ್ಯದ ಅಡುಗೆಗಳು, ಆಯುರ್ವೇದದ ಅಡುಗೆಗಳು, ಸಾಂಪ್ರದಾಯಕ ಅಡುಗೆ, ವೀಕ್ಷಕರ ಮನೆ ಅಡುಗೆಗಳು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿವೆ.

ಇದೇ ವೇಳೆ ನಟ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿ ಒಗ್ಗರಣೆ ಡಬ್ಬಿ ಭಾಗ 6 ಬ್ರೇಕ್‍ಫಾಸ್ಟ್ ರೆಸಿಪಿ ಪುಸ್ತಕವನ್ನು ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ರುಚಿಕರವಾದ ಅಡುಗೆ ಮಾಡಿದರು. ಕಿರುತೆರೆ ನಿರ್ದೇಶಕಿ ಶ್ರುತಿ ನಾಯ್ಡು ಸಾಂಪ್ರದಾಯಿಕ ಅಡುಗೆ ಮಾಡಿ ಸಂಕ್ರಾಂತಿಯ ಸೊಬಗು ಹೆಚ್ಚಿಸಿದರು.  ಬ್ರೇಕ್‍ಫಾಸ್ಟ್ ರೆಸಿಪಿ ಒಳಗೊಂಡ ಒಗ್ಗರಣೆ ಡಬ್ಬಿ ಭಾಗ 6 ಪುಸ್ತಕ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry