ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಪಕ್ಷಗಳಿಂದ ಸಂವಿಧಾನ ಕಡೆಗಣನೆ’

ಮಾಯಾವತಿ ಜನ್ಮದಿನದ ಅಂಗವಾಗಿ ‘ಪ್ರಜಾಪ್ರಭುತ್ವದ ಉಳಿವಿನ ಕಡೆಗೆ ಆನೆಯ ನಡಿಗೆ’ ಬೈಕ್‌ ರ‍್ಯಾಲಿ
Last Updated 18 ಜನವರಿ 2018, 11:52 IST
ಅಕ್ಷರ ಗಾತ್ರ

ಕನಕಪುರ: ರಾಜ್ಯದಲ್ಲಿ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಮೂರು ಪಕ್ಷಗಳಿಂದ ಸಂವಿಧಾನ ಉಳಿಸುವ ಕೆಲಸವಾಗುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬಂದಿದೆ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹರಿರಾಮ್‌ ದೂರಿದರು.

ನಗರದಲ್ಲಿ ಬಿಎಸ್‌ಪಿ ವತಿಯಿಂದ ಮಾಯಾವತಿ ಜನ್ಮದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ರಜಾಪ್ರಭುತ್ವದ ಉಳಿವಿನ ಕಡೆಗೆ ಆನೆಯ ನಡಿಗೆ ಕಾರ್ಯಕ್ರಮದ ಬೈಕ್‌ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ರಾಜ್ಯವನ್ನಾಳಿರುವ ಮೂರು ಪಕ್ಷಗಳು ಸಂವಿಧಾನವನ್ನು ತಮ್ಮ ಸ್ವಾರ್ಥಕ್ಕೆ ಬಳಿಸಿಕೊಂಡಿದ್ದು, ಸಂವಿಧಾನದ ಆಶಯ ಬಲಿಕೊಟ್ಟಿವೆ. ಪ್ರಜಾಪ್ರಭುತ್ವದ ವ್ಯವಸ್ಥೆ ಬುಡಮೇಲು ಮಾಡಿವೆ. ಇಂತಹ ಪಕ್ಷಗಳಿಂದ ರಾಜ್ಯ ದೇಶ ಪ್ರಗತಿ ಸಾಧಿಸಲು ಎಲ್ಲ ಜನರಿಗೂ ಸಂವಿಧಾನದಡಿಯಲ್ಲಿ ಸಮಾನ ಅವಕಾಶ ಕಲ್ಪಿಸಲು ಸಾಧ್ಯ ಇಲ್ಲ ಎಂದರು.

ಈ ಮೂರು ಪಕ್ಷಗಳು ದೂರವಿಟ್ಟು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಅರಿತಿರುವ, ಸಂವಿಧಾನದ ಆಶಯದಡಿ ಪ್ರಜಾಪ್ರಭುತ್ವ ಉಳಿಸಲು ಕೆಲಸ ಮಾಡುವ ಬಿಎಸ್‌ಪಿ ಗೆ ಒಂದು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಕಾರ್ಯದರ್ಶಿ ಅನ್ನದಾನಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಸರ್ಕಾರಿ ಆಸ್ಪತ್ರೆ ದಿವಾಳಿಯಾಗಿದೆ. ಯಾವುದೇ ಆರೋಗ್ಯ ಸೇವೆ ಬೇಕು ಎಂದರೂ ಬೆಂಗಳೂರಿಗೆ ಇಲ್ಲವೇ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು. ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಸಂಯೋಜಕ ನೀಲಿ ರಮೇಶ್‌ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಸಕಿ ಹಾಕಲಾಗುತ್ತಿದೆ. ಸಂವಿಧಾನದ ನಾಲ್ಕು ಅಂಗಗಳನ್ನು ವಿಫಲಗೊಳಿಸಲಾಗಿದೆ. ಸಂವಿಧಾನದ ಆಶಯ ತಿಳಿದು ಕೆಲಸ ಮಾಡುವ ಬಿಎಸ್‌ಪಿ ಬೆಂಬಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾಗೇಶ್‌, ಪ್ರಧಾನ ಕಾರ್ಯದರ್ಶಿ ಹರಿಹರ ಲಿಂಗರಾಜು, ಕಾರ್ಯದರ್ಶಿ ಗೋಪಿ, ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಮಹದೇವಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ, ಮುಖಂಡರಾದ ಮೆಳೆಕೋಟೆ ಶಿವಣ್ಣ, ಶೇಖರ್‌, ಮುನಿರಾಜು, ಶಿವಮಾದು, ಬಸವರಾಜು, ಅಶ್ವತ್ಥ್‌ ಕೃಷ್ಣಮೂರ್ತಿ ಇದ್ದರು.
***
ಕನಕೋತ್ಸವ ಎಂದರೆ ಅಭಿವೃದ್ಧಿ ಅಲ್ಲ

ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್‌ ಮಾತನಾಡಿ, ತಾಲ್ಲೂಕಿನಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಅವರು ನಾಲ್ಕು ಹೊಸ ಕಟ್ಟಡ, ಕಚೇರಿ ಕಟ್ಟಿಸುವುದು, ವಿಜೃಂಭಣೆಯಿಂದ ಕನಕೋತ್ಸವ ಮಾಡುವುದೇ ನಿಜವಾದ ಅಭಿವೃದ್ಧಿ ಎಂದುಕೊಂಡಿದ್ದಾರೆ ಎಂದರು.

ಇವುಗಳಿಂದ ಅಭಿವೃದ್ಧಿ ಆಗದು. ನಿರುದ್ಯೋಗ ಸಮಸ್ಯೆ ನಿವಾರಣೆ, ತಲಾದಾಯ, ಸಾಕ್ಷರತೆ ಪ್ರಮಾಣ ಹೆಚ್ಚಿಸುವುದು, ಸದೃಢ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು, ಪ್ರತಿಯೊಬ್ಬ ಬಡವರಿಗೂ ಗುಣಮಟ್ಟಣದ ಶಿಕ್ಷಣ ಮತ್ತು ಆರೋಗ್ಯ ಸೇವೆ ಸಿಗುವಂತೆ ಮಾಡುವುದು ನಿಜವಾದ ಅಭಿವೃದ್ಧಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT