ಮಕ್ಕಳಲ್ಲಿ ಸಂಸ್ಕಾರ ತುಂಬಿ: ಬೆಜ್ಜವಳ್ಳಿ ಶ್ರೀ

7

ಮಕ್ಕಳಲ್ಲಿ ಸಂಸ್ಕಾರ ತುಂಬಿ: ಬೆಜ್ಜವಳ್ಳಿ ಶ್ರೀ

Published:
Updated:
ಮಕ್ಕಳಲ್ಲಿ ಸಂಸ್ಕಾರ ತುಂಬಿ: ಬೆಜ್ಜವಳ್ಳಿ ಶ್ರೀ

ಹೊಳೆಹೊನ್ನೂರು: ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಬೇಕು ಎಂದು ಬೆಜ್ಜವಳ್ಳಿ ಪೀಠದ ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.

ಸಮೀಪದ ಯಡೇಹಳ್ಳಿಯ ಜ್ಞಾನಶ್ರೀ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಆಯೋಜಿಸಿದ ಜ್ಞಾನಶ್ರೀ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ನಂತರ ಅವರು ಆಶೀರ್ವಚನ ನೀಡಿದರು.

ಮಕ್ಕಳಿಗೆ ಬಾಲ್ಯದಿಂದಲೂ ಮೈತುಂಬ ಬಟ್ಟೆ ಹಾಕಿ ಭಾರತೀಯತೆಯ ಭಾವನೆಯನ್ನು ಬೆಳೆಸಿ, ಸುಸಂಸ್ಕೃತರಾಗಿಸುವ ನಿಟ್ಟಿನಲ್ಲಿ ಪಾಲಕರು ಶ್ರಮ ಪಡಬೇಕು. ರ‍್ಯಾಂಕ್ ಕೊಡಿಸುವ ಧಾವಂತದಲ್ಲಿ ಮುಗ್ಧ ಮಕ್ಕಳ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳು ಹೊರ ಜಗತ್ತಿಗೆ ಕಾಣುತ್ತಿಲ್ಲ. ಮಕ್ಕಳನ್ನು ಬಾಲ್ಯದಲ್ಲಿ ಬೋರ್ಡಿಂಗ್ ಸ್ಕೂಲ್‌ಗಳಿಗೆ ದಾಖಲಿಸುವ ಪಾಲಕರು, ಕೊನೆಯ ದಿನಗಳನ್ನು ವೃದ್ಧಾಶ್ರಮಗಳಲ್ಲಿ ಕಳೆಯಬೇಕಾಗುತ್ತದೆ’ ಎಂದರು.

‘ಪ್ರಜಾವಾಣಿ’ ಹಿರಿಯ ವರದಿಗಾರ ಚಂದ್ರಹಾಸ ಹಿರೇಮಳಲಿ ಮಾತನಾಡಿ, ‘ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಬೇಕು. ಮಕ್ಕಳನ್ನು ಭತ್ತದ ಚೀಲ ಮಾಡುವ ಬದಲು ಭತ್ತದ ಗದ್ದೆಯನ್ನಾಗಿಸಿದರೆ ಪ್ರತಿ ಬಾರಿಯೂ ಬೆಳೆ ಬೆಳೆಯಬಹುದು’ ಎಂದರು.

ಜ್ಞಾನಶ್ರೀ ಸಂಸ್ಥೆಯ ಸಂಸ್ಥಾಪಕ ದೇವರಾಜ್ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಪಾಲಕರ ಶಿಕ್ಷಣಕ್ಕಾಗಿ ಮಕ್ಕಳನ್ನು ಪಟ್ಟಣಗಳ ಪ್ರತಿಷ್ಠಿತ ಸಂಸ್ಥೆಗಳಿಗೆ ದಾಖಲಿಸಿ ಮಕ್ಕಳಿಂದ ದೂರವಿದ್ದು, ನೋವು ಅನುಭವಿಸಬಾರದು’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಿರಣ್‌ಕುಮಾರ್, ಸಂಸ್ಥೆಯ ಅಧ್ಯಕ್ಷ ಎಚ್.ಬಸಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಗೋವಿಂದನಾಯ್ಕ್, ದೇವರಾಜ್, ಮೃತ್ಯಂಜಯ ಸ್ವಾಮಿ, ಯುವರಾಜ್, ಮಂಜುನಾಥ್, ಜ್ಯೋತಿಪ್ರಿಯಾ, ನಂದ್ಯಪ್ಪ, ನಾಗರಾಜ್, ಫಾಲಾಕ್ಷಪ್ಪ, ಪತ್ರಕರ್ತರಾದ ಎಚ್.ಜಿ. ವಿಜಯರಾಜ್, ರಂಗನಾಥ್, ಎಸ್.ಕುಮಾರ್ ಅವರೂ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry