ಮೂಲಸೌಕರ್ಯಕ್ಕೆ ಆದ್ಯತೆ: ಶಿರವಾಳ

7

ಮೂಲಸೌಕರ್ಯಕ್ಕೆ ಆದ್ಯತೆ: ಶಿರವಾಳ

Published:
Updated:

ಕೆಂಭಾವಿ: ‘ಶಹಾಪುರ ಮತಕ್ಷೇತ್ರದಲ್ಲಿ ಬರುವ ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಪ್ರತಿ ಗ್ರಾಮಗಳ ಅಭಿವೃದ್ಧಿಯೆ ನನ್ನ ಮೊದಲ ಆದ್ಯತೆ’ ಎಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.

ಸಮೀಪದ ಮಲ್ಲಾ ಕ್ರಾಸ್‌ನಲ್ಲಿ 2017–18ನೇ ಸಾಲಿನ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಮಲ್ಲಾದಿಂದ ಕೆಂಭಾವಿಯ 9.8 ಕಿ.ಮೀ ರಸ್ತೆಯ ₹1.25 ಕೋಟಿ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.

‘ಮತಕ್ಷೇತ್ರದಲ್ಲಿ ಸಿಸಿ ರಸ್ತೆ, ಒಳಚರಂಡಿ, ಶಾಲಾ ಕೋಣೆಗಳ ನಿರ್ಮಾಣ, ಸಮುದಾಯ ಭವನ ಒದಗಿಸಿದ್ದೇನೆ. ಇದರಿಂದ ಕ್ಷೇತ್ರದ ಜನ ಅಭಿವೃದ್ಧಿ  ಕೆಲಸಗಳನ್ನು ಗುರುತಿಸುವಂತಾಗಿದೆ’ ಎಂದು ಹೇಳಿದರು.

ವಿರೇಂದ್ರ ದೇಸಾಯಿ, ತಿಪ್ಪರೆಡ್ಡೆಪ್ಪಗೌಡ, ವಿಶ್ವನಾಥರೆಡ್ಡಿ, ಮಲ್ಲಣ್ಣ, ಸುಭಾಸ ದೇಸಾಯಿ, ಅಮೃತಗೌಡ, ದೊಡ್ಡಪ್ಪಗೌಡ, ಸಿದ್ದಣ್ಣ ದೊರಿ, ಶಂಕರಗೌಡ, ಮಶಾಕಸಾಬ ಸಾಸನೂರ, ಭೀಮನಗೌಡ ಕಾಚಾಪುರ, ಸಂಗಣ್ಣ ತುಂಬಗಿ, ಶಂಕ್ರೆಪ್ಪ ದೇವೂರ, ವಿಕಾಸ ಸೊನ್ನದ, ರವಿ ಸೊನ್ನದ, ತಾಹೀರ ಖಾಜಿ, ಗೌಡಪ್ಪಗೌಡ ಅಸಂತಾಪುರ, ಅಮರಪ್ಪ, ಸುಭಾಸ ಮ್ಯಾಗೇರಿ, ದೇವು ಕವಾಲ್ದಾರ, ಮಾಳಪ್ಪ ರಾಜಾಪುರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry