ಹೀಗಿರಲಿ ಬಾಗಿಲಿನ ಅಲಂಕಾರ...

7

ಹೀಗಿರಲಿ ಬಾಗಿಲಿನ ಅಲಂಕಾರ...

Published:
Updated:
ಹೀಗಿರಲಿ ಬಾಗಿಲಿನ ಅಲಂಕಾರ...

ಜೀವನವೇ ಒಂದು ಕಲೆ. ಪ್ರತಿಯೊಂದು ಸಂಗತಿಗೂ ಕಲೆಯ ಸ್ಪರ್ಶ ನೀಡಿದಾಗ ಅದರ ಸೌಂದರ್ಯ ಇಮ್ಮಡಿಸುತ್ತದೆ. ಅಂತೆಯೇ, ಬಾಗಿಲನ್ನು ಸಿಂಗರಿಸುವುದೂ ಕೂಡ ಒಂದು ಕಲೆ. ಬಾಗಿಲನ್ನು ಅಚ್ಚುಕಟ್ಟಾಗಿ ಅಲಂಕರಿಸುವುದರ ಮೂಲಕ ಮನೆಗೆ ಬರುವ ಅತಿಥಿಗಳ ಕಂಗಳಿಗೂ ಮುದ ಕೊಡಬಹುದು. ಬಿಡುವಿಲ್ಲದ ಜೀವನದ ನಡುವೆಯೂ ಮನೆಯ ಬಾಗಿಲನ್ನು ಅಂದವಾಗಿಟ್ಟುಕೊಳ್ಳಬಹುದು. ಅದಕ್ಕೆ ನೆರವಾಗುವ ಸರಳ ಟಿಪ್ಸ್‌ಗಳು ಇಂತಿವೆ.

*ಬಾಗಿಲಿಗೆ ಹಾಕುವ ತೋರಣಗಳು ಸರಳವಾಗಿದ್ದು, ಭಾರತೀಯ ಶೈಲಿಯಲ್ಲಿದ್ದರೆ ಬಾಗಿಲಿನ ಮೆರುಗು ಹೆಚ್ಚುತ್ತದೆ.

*ರಜಾದಿನಗಳಲ್ಲಿ ಸ್ವಲ್ಪ ಸಮಯವನ್ನು ಬಾಗಿಲಿಗೆ ಕಟ್ಟಿದ ತೋರಣ ಬದಲಾಯಿಸುವುದು, ಬಾಗಿಲು ತೊಳೆಯುವುದು ಹಾಗೂ ತೋರಣದ ದೂಳು ಒರೆಸುವುದಕ್ಕೆ ಮೀಸಲಿಡಿ.

*ಹೊಸ್ತಿಲಿಗೆ ಗಂಧ, ತಿಲಕವನ್ನು ಪ್ರತಿನಿತ್ಯ ಹಚ್ಚಲು ಸಾಧ್ಯವಿಲ್ಲ ಎಂದಾದರೆ ಬಣ್ಣ ಹಚ್ಚಬಹುದು.

*ಮಾವಿನ ಎಲೆಯನ್ನು ಹೋಲುವ ಅಲಂಕಾರಿಕ ಮಾವಿನ ಎಲೆಗಳು ಮಾರುಕಟ್ಟೆಯಲ್ಲಿ ಲಭ್ಯ. ಇದನ್ನೂ ಬಳಸಬಹುದು.

* ಬಾಗಿಲಿಗೆ ತೂಗು ಹಾಕುವ ತೋರಣ ಒಳಕ್ಕೆ ಬರುವವರ ತಲೆಗೆ ತಾಗದಂತಿರಲಿ. ಬದಿಯಲ್ಲಿ ಇಳಿಬಿಟ್ಟರೆ ಉತ್ತಮ.

* ಹೂವಿನ ತೋರಣವನ್ನು ಬಾಗಿಲಿನ ಎರಡೂ ಅಂಚಿನಲ್ಲೂ ಇಳಿಬಿಟ್ಟರೆ ಬಾಗಿಲು ಚೆಂದ ಕಾಣುತ್ತದೆ.

* ಕದದಲ್ಲಿ ಪ್ರತಿದಿನವೂ ಹೂವಿನ ತೋರಣ ಇರಬೇಕೆಂದು ಬಯಸುವವರು ಮಾರುಕಟ್ಟೆಯಲ್ಲಿ ಸಿಗುವ ಕೃತಕ ತೋರಣಗಳನ್ನು ಬಳಸಬಹುದು.

* ಸ್ಟಿಕ್ ತೋರಣಗಳನ್ನು ತಿಂಗಳಿಗೊಮ್ಮೆ ತೊಳೆದು ಹಾಕಿದರೆ ಶುಭ್ರವಾಗಿ ಕಾಣುತ್ತದೆ.

* ಮಣಿ, ಚಿಪ್ಪುಗಳಿಂದ ಅಲಂಕರಿಸುವಾಗ ಅದನ್ನು ಶುಚಿಯಾಗಿ ಇರಿಸಿಕೊಳ್ಳುವ ದೃಷ್ಟಿಯಿಂದ ವಾರಕೊಮ್ಮೆ ತೊಳೆದರೆ ಒಳಿತು.

*ಕನ್ನಡಿ ಕುಸುರಿ ಅಂದರೆ ಲಂಬಾನಿ ಶೈಲಿಯ ತೋರಣಗಳೂ ಬಾಗಿಲಿನ ಸೌಂದರ್ಯ ಹೆಚ್ಚಿಸುತ್ತವೆ.

* ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆ ಹೇಗೆ ಕಾಣಿಸಬೇಕು ಎಂಬ ಆಲೋಚನೆ ಎಲ್ಲರಿಗೂ ಇರುತ್ತದೆ. ಹಾಗಾಗಿ, ಕಸೂತಿ ಕಲೆ ಗೊತ್ತಿದ್ದರೆ ನೀವೇ ತಯಾರಿಸಿದ ಚೆಂದದ ತೋರಣವನ್ನು ಬಾಗಿಲಿಗೆ ತೂಗು ಹಾಕಿ.

-ದಿನೇಶ್ ಸಿ.ಎಚ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry